ನ್ಯೂಝಿಲೆಂಡ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಜಸಿಂಡಾ
ವೆಲ್ಲಿಂಗ್ಟನ್: ಜಸಿಂಡಾ ಅರ್ಡೆರ್ನ್ ಅವರು ಫೆಬ್ರವರಿ 7 ರಂದು ನ್ಯೂಝಿಲೆಂಡ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಘೋಷಿಸಿದ್ದಾರೆ.
ಪಕ್ಷದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಜಸಿಂಡಾ ಈ ವರ್ಷ ಮರು ಚುನಾವಣೆ ಎದುರಿಸಲು ನನಗೆ ಆಸಕ್ತಿ ಇಲ್ಲ. ಪ್ರಧಾನಿಯಾಗಿ ನನ್ನ ಕೊನೆಯ ದಿನ ಫೆಬ್ರವರಿ 7 ಆಗಿದೆ ಎಂದಿದ್ದಾರೆ. 2023 ರ ಅಕ್ಟೋಬರ್ 14 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ನ್ಯೂಝಿಲೆಂಡ್ ಅನ್ನು ಮುನ್ನಡೆಸಿದ ಐದೂವರೆ ವರ್ಷಗಳ ಅಧಿಕಾರಾವಧಿಯ ನಂತರ ಅರ್ಡೆರ್ನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.




