ಕರ್ನಾಟಕ ‘SSLC’ ಮುಖ್ಯ ಪರೀಕ್ಷೆ’ಯ ಪರಿಷ್ಕೃತ ಅಂತಿಮ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದೀಗ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಏಪ್ರಿಲ್ 4 ರಂದು ಮಹಾವೀರ ಜಯಂತಿ ರಜೆ ಇರುವ ಕಾರಣ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕರು ಮಾಹಿತಿ ಬಿಡುಗಡೆ ಮಾಡಿದ್ದಾರೆ. 2023ರ ಎಸ್ ಎಸ್ ಎಲ್ ಸಿ ಮುಖ್ಯಪರೀಕ್ಷೆಯನ್ನು ದಿನಾಂಕ 31-03-2023 ರಿಂದ 15-04-2023ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ಹೀಗಿದೆ ಪರಿಷ್ಕೃತ ವೇಳಾಪಟ್ಟಿ:
ಮಾರ್ಚ್ 31- ಪ್ರಥಮ ಭಾಷೆ,
ಏಪ್ರಿಲ್ 3- ಗಣಿತ,
ಏಪ್ರಿಲ್ 6- ದ್ವಿತೀಯ ಭಾಷೆ,
ಏಪ್ರಿಲ್ 10- ವಿಜ್ಞಾನ,
ಏಪ್ರಿಲ್ 12- ತೃತೀಯ ಭಾಷೆ,
ಏಪ್ರಿಲ್ 15- ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ.




