August 13, 2026

ಮಹಿಳೆಗೆ ಕಿರುಕುಳ ನೀಡಿದ ಆರೋಪ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ

0
j6cirjjc_khandwa-man-beaten_625x300_18_January_23.jpg

ಭೋಪಾಲ್: ಮಧ್ಯಪ್ರದೇಶದಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ. ಹಲ್ಲೆ ನಡೆದಿರುವ ಖಾಂಡ್ವಾದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶಾಪಿಂಗ್ ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿ ವ್ಯಕ್ತಿಯನ್ನು ಸುತ್ತುವರೆದಿರೆದ ಗುಂಪೊಂದು ಆರಂಭದಲ್ಲಿ ಅವನಿಗೆ ಬೆದರಿಕೆ ಹಾಕಿ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯಿಸುತ್ತಾರೆ. ನಂತರ ಅವರು ಅವನನ್ನು ನಿಂದಿಸಿ ಮತ್ತು ಕಪಾಳಮೋಕ್ಷ ಮಾಡಲು ಪ್ರಾರಂಭಿಸುತ್ತಾರೆ. ನಂತರ ಅವನನ್ನು ಎಳೆದೊಯ್ದು ಇಬ್ಬರು ರಾಡ್‌ಗಳಿಂದ ಅವನನ್ನು ಹೊಡೆಯುವಂತ‌ ವಿಡಿಯೋ ವೈರಲ್ ಆಗಿದೆ.

ಈ ಘಟನೆ ಜನವರಿ 3 ರಂದು ನಡೆದಿದ್ದು, ಅದೇ ದಿನ ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಡಿಯೋ ವೈರಲ್ ಆದ ನಂತರ ಆರೋಪಿಗಳನ್ನು ಬಂಧಿಸಲಾಗಿದೆ.

ಸಂತ್ರಸ್ತನು ಸಹರ್ ಗ್ರಾಮದ ನಿವಾಸಿ ಮತ್ತು ಕಾಲೇಜು ವಿದ್ಯಾರ್ಥಿ. ಅವನ ವಿರುದ್ಧ ಪಿತೂರಿ ನಡೆದಿದೆ. ಅವನು ಮುಸ್ಲಿಂ ಎಂಬ ಕಾರಣಕ್ಕೆ ತಪ್ಪಾಗಿ ಆರೋಪಿಸಿ ಥಳಿಸಲಾಗಿದೆ ಎಂದು ಖಾಂಡ್ವಾ ಶಹರ್ ಖಾಜಿ ಸೈಯದ್ ನಿಸಾರ್ ಅಲಿ ಸುದ್ದಿಗಾರರಿಗೆ ತಿಳಿಸಿದರು.

ಸೆಹಬಾಜ್ ಸ್ಥಳೀಯ ಎಸ್‌ಎನ್ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಕೋರ್ಸ್ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!