ವಿಕಿಪೀಡಿಯಾ ದಂತಹ ಆನ್‌ಲೈನ್ ಮೂಲಗಳು ಸಂಪೂರ್ಣವಾಗಿ ವಿಶ್ವಾಸಾರ್ಹವಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ವಿಕಿಪೀಡಿಯಾ(Wikipedia)ದಂತಹ ಆನ್‌ಲೈನ್ ಮೂಲಗಳು ಜನಸಮೂಹದ ಮೂಲ ಮತ್ತು ಬಳಕೆದಾರರು ರಚಿಸಿದ ಎಡಿಟಿಂಗ್ ಮಾದರಿಗಳನ್ನು ಆಧರಿಸಿವೆ. ಇದು ಸಂಪೂರ್ಣವಾಗಿ ವಿಶ್ವಾಸಾರ್ಹವಲ್ಲ ಮತ್ತು ತಪ್ಪುದಾರಿಗೆಳೆಯುವ ಮಾಹಿತಿಯನ್ನು ಉತ್ತೇಜಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರ ಪೀಠವು ಜಗತ್ತಿನಾದ್ಯಂತ ಜ್ಞಾನಕ್ಕೆ ಉಚಿತ ಪ್ರವೇಶವನ್ನು ಒದಗಿಸುವ ವೇದಿಕೆಗಳ ಉಪಯುಕ್ತತೆಯನ್ನು ಒಪ್ಪಿಕೊಂಡಿದೆ ಎಂದು ಹೇಳಿದೆ. ಆದರೆ, ಕಾನೂನು ವಿವಾದ ಪರಿಹಾರಕ್ಕಾಗಿ ಅಂತಹ ಮೂಲಗಳನ್ನು ಬಳಸದಂತೆ ಎಚ್ಚರಿಕೆ ನೀಡಿದೆ.
‘ಈ ಮೂಲಗಳು ಜ್ಞಾನದ ಸಂಪತ್ತಾಗಿದ್ದರೂ, ಜನಸಮೂಹದಿಂದ ಪಡೆದ ಮತ್ತು ಬಳಕೆದಾರು ರಚಿಸಿದ ಎಡಿಟಿಂಗ್ ಮಾದರಿಗಳನ್ನು ಆಧರಿಸಿವೆ ಎಂಬ ಕಾರಣಕ್ಕಾಗಿ ನಾವು ಹೀಗೆ ಹೇಳುತ್ತೇವೆ. ಅದು ಶೈಕ್ಷಣಿಕ ಸತ್ಯಾಸತ್ಯತೆಯ ದೃಷ್ಟಿಯಿಂದ ಸಂಪೂರ್ಣವಾಗಿ ವಿಶ್ವಾಸಾರ್ಹವಲ್ಲ ಮತ್ತು ತಪ್ಪುದಾರಿಗೆಳೆಯುವ ಮಾಹಿತಿಯನ್ನು ಉತ್ತೇಜಿಸಬಹುದು. ಹಿಂದಿನ ಸಂದರ್ಭಗಳಲ್ಲಿಯೂ ಈ ನ್ಯಾಯಾಲಯವು ಇದನ್ನೇ ಹೇಳಿತ್ತು ಎಂದು ಪೀಠವು ಮಂಗಳವಾರ ಹೇಳಿದೆ.
ನ್ಯಾಯಾಲಯಗಳು ಮತ್ತು ನ್ಯಾಯಾಂಗ ಅಧಿಕಾರಿಗಳು ಹೆಚ್ಚು ವಿಶ್ವಾಸಾರ್ಹ ಮತ್ತು ಅಧಿಕೃತ ಮೂಲಗಳನ್ನು ಅವಲಂಬಿಸುವಂತೆ ವಕೀಲರನ್ನು ಮನವೊಲಿಸಲು ಪ್ರಯತ್ನಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.




