March 20, 2026

ಏರ್‌ ಪೋರ್ಟ್‌ಗೆ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ: ಆರೋಪಿ ವೈಭವ್ ನನ್ನು ಬಂಧಿಸಿದ ಪೊಲೀಸರು

0
image_editor_output_image-1249339122-1671787643180.jpg

ಬೆಂಗಳೂರು: ಬೆಂಗಳೂರು ಸಂಚಾರ ದಟ್ಟಣೆಗೆ ಬೇಸತ್ತ ಎಂಜಿನಿಯರ್‌ ವಿದ್ಯಾರ್ಥಿಯೊಬ್ಬ ಏರ್‌ ಪೋರ್ಟ್‌ಗೆ ಬಾಂಬ್‌ ಇಟ್ಟಿರುವುದಾಗಿ ಟ್ವೀಟ್‌ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

ಕೂಡ್ಲು ಗೇಟ್‌ ನಿವಾಸಿ ವೈಭವ್‌ ಗಣೇಶ್‌ (21) ಬಂಧಿತ ವಿದ್ಯಾರ್ಥಿ. ಆರೋಪಿಯಿಂದ ಟ್ವೀಟ್‌ ಮಾಡಲು ಬಳಸಿದ್ದ ಮೊಬೈಲ್‌ ವಶಕ್ಕೆ ಪಡೆಯಲಾಗಿದೆ.
ವಿಮಾನ ನಿಲ್ದಾಣದ ಟರ್ಮಿನಲ್‌ ಮ್ಯಾನೇಜರ್‌ ರೂಪಾ ಮ್ಯಾಥ್ಯೂವ್‌ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ವೈಭವ್‌ ಗಣೇಶ್‌ ಪೋಷಕರು ಪಂಜಾಬ್‌ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೂಡ್ಲು ಗೇಟ್‌ ಬಳಿ ವಾಸವಾಗಿದ್ದಾರೆ. ವೈಭವ್‌ ಗಣೇಶ್‌ ಪಂಜಾಬ್‌ನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್‌ ಓದುತ್ತಿದ್ದಾನೆ.

Leave a Reply

Your email address will not be published. Required fields are marked *

error: Content is protected !!