September 20, 2024

ವಿಟ್ಲ: ಹಿಂದೂ ವಿರೋಧಿ ಲೇಖನ ಬರೆದು ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಅರಣ್ಯಾಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ ಭಜನಾ ಪರಿಷತ್

0

ವಿಟ್ಲ: ಹಿಂದೂ ವಿರೋಧಿ ಲೇಖನ ಪ್ರಕಟಿಸಿ ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಸಂಜೀವ ಪೂಜಾರಿ ವಿರುದ್ಧ ಕ್ರಮ ಜರುಗಿಸುವಂತೆ   ವಿಟ್ಲ ಸೀಮೆಯ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

ಉಪವಲಯ ಅರಣ್ಯಾಧಿಕಾರಿ  ಸಂಜೀವ ಪೂಜಾರಿ ಎಂಬಾತ ತನ್ನ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕುಣಿತ ಭಜನೆಯಿಂದ ಮಲಗಿದ ಭಜನೆ ಎಂಬ ತಲೆಬರಹದಲ್ಲಿ ಸುಳ್ಳು  ಆಧಾರ ರಹಿತ ವಿಚಾರವನ್ನು ತಪ್ಪು ಮಾಹಿತಿಯಿಂದ ಕೂಡಿದಂತಹ ಸಂದೇಶ ಲೇಖನ ಪ್ರಕಟಿಸಿದ್ದಾನೆ. ಅಶ್ಲೀಲವಾಗಿ ಬರೆದು  ನಿಂದಿಸಲಾಗಿದೆ. ಮಹಿಳೆಯರ ಚಾರಿತ್ರ್ಯಕ್ಕೆ ಗೌರವಕ್ಕೆ ದಕ್ಕೆ ತರುವ ಒಳಾರ್ಥ ಹೊಂದಿರುವ ಅಶ್ಲೀಲ ಪದ ಬಳಕೆ ಮಾಡಿ ಅದನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲಲಾಣಗಳಲ್ಲಿ ವ್ಯಾಪಾಕವಾಗಿ ಪ್ರಸಾರ ಮಾಡಿದ್ದು , ಇದು ಸಮಾಜದ ಭಿನ್ನ ವರ್ಗಗಳ ಮಧ್ಯದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸಂಘರ್ಷ ಹುಟ್ಟು ಹಾಕುವ ರೀತಿಯಲ್ಲಿ ಗುಂಪುಗಳ ಮಧ್ಯೆ ಸಂಘಟನೆಗಳ ಮಧ್ಯೆ ಗಲಭೆ ಹುಟ್ಟುವಂತೆ ಸಾಮಾಜಿಕ ಸಾಮರಸ್ಯ ಸ್ವಾಸ್ಥ್ಯ ಕೆಡುವ ರೀತಿಯಲ್ಲಿ ಉದ್ರೇಕಿಸುವ ರೀತಿಯಲ್ಲಿ ಹಾಗೂ ಇಲ್ಲ ಸಲ್ಲದ ಸುಳ್ಳು ಸಂದೇಶ ರವಾನಿಸಿರುತ್ತಾನೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಿಟ್ಲ ಎಸೈ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿದ ನಿಯೋಗದಲ್ಲಿ
ಭಜನಾ ಪರಿಷತ್ ಅಧ್ಯಕ್ಷ ಕೃಷ್ಣಯ್ಯ ಕೆ, ಕಾರ್ಯದರ್ಶಿ ಜಯರಾಮ ನಾಯ್ಕ ಕುಂಟ್ರಕಲ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪದ್ಮನಾಭ ಕಟ್ಟೆ, ಭಜನಾ ಪರಿಷತ್ ನ  ಪ್ರಮುಖರಾದ ಭಾಸ್ಕರ ಕಾಮಟ, ಮಾಧವ ಬಂಗೇರ ಕೇಪುಳ ಗುಡ್ಡೆ, ರಮೇಶ್ ಕಡಂಬು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!