ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್ (ರಿ): ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ
ವಿಟ್ಲ,: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್ (ರಿ) ವಿಟ್ಲ, ವಿಟ್ಲ ತಾಲೂಕಿನ ಸಾಲೆತ್ತೂರು ವಲಯದ ಪ್ರಗತಿಬಂಧು ಸ್ವ – ಸಹಾಯ ಸಂಘ, ಜನಜಾಗೃತಿ ವೇದಿಕೆ ಸಾಲೆತ್ತೂರು ವಲಯ, ಶೌರ್ಯ ವಿಪತ್ತು ಘಟಕ ಸಾಲೆತ್ತೂರು ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಸಿದ್ದಿವಿನಾಯಕ ಭಜನಾ ಮಂದಿರ ಕುಕ್ಕಾಜೆಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು.
ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾದ ರಮೇಶ್ ರಾವ್ ಪತ್ತು ಮುಡಿಯವರ ಅಧ್ಯಕ್ಷತೆಯಲ್ಲಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ರಾಜಶೇಖರ ರಾವ್ ಕಾರಿಂಜ ದಿಕ್ಸೂಚಿ ಭಾಷಣ ಮಾಡಿದರು.
ಗ್ರಾಮಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ -2ರ ನಿರ್ದೇಶಕ ಬಾಬು ನಾಯ್ಕ ಅವರು ಗ್ರಾಮಾಭಿವೃದ್ಧಿ ಯೋಜನೆಯ ಸ್ಥೂಲ ಪರಿಚಯ ನೀಡಿದರು.
ವಿಟ್ಲ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಶ್ ಗೌಡ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.
ಮುಖ್ಯ ಅಥಿತಿಗಳಾಗಿದ್ದ ಎಸ್. ಆರ್. ಸತೀಶ್ಚಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮೂಲಕ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸರಕಾರದಿಂದಲೂ ಮಾಡಿಸಲು ಸಾಧ್ಯವಿಲ್ಲ ಎಂಬ ಶ್ಲಾಘನೆ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ವಲಯಧ್ಯಕ್ಷರಾದ ಅರವಿಂದ ರೈ ಮೂರ್ಜೆಬೆಟ್ಟು, ವಿಟ್ಲ ತಾಲೂಕಿನ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾದ ದೇವಿದಾಸ ಶೆಟ್ಟಿ ಪಾಲ್ತಾಜೆ, ಗ್ರಾಮಭಿವೃದ್ಧಿ ಯೋಜನೆಯ ಸಾಲೆತ್ತೂರು ವಲಯಧ್ಯಕ್ಷರಾದ ದಿನೇಶ್ ಶೆಟ್ಟಿ, ಸಾಲೆತ್ತೂರು ಒಕ್ಕೂಟದ ಅಧ್ಯಕ್ಷರಾದ ಈಶ್ವರ ಪೂಜಾರಿ ಮಾವೆ ಮತ್ತಿತ್ತರು ಉಪಸ್ಥಿತರಿದ್ದರು. ಮಂಚಿ ಒಕ್ಕೂಟದ ಅಧ್ಯಕ್ಷರಾದ ದಿವಾಕರ್ ನಾಯಕ್ ಕುಂಟೂರು ಸ್ವಾಗತಿಸಿ, ಸೇವಾ ಪ್ರತಿನಿಧಿ ಶ್ರೀಮತಿ ಕುಶಲ ವಂದನಾರ್ಪಣೆ ಸಲ್ಲಿಸಿದರು. ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾ ವಲಯದ ಸಾಧನಾ ವರದಿಯನ್ನು ಮಂಡಿಸಿದರು. ಗಣೇಶ್ ಶೆಟ್ಟಿ ಬಾರೆಬೆಟ್ಟು ಕಾರ್ಯಕ್ರಮ ನಿರೂಪಿಸಿದರು.




