March 26, 2026

ಮಂಗಳೂರು: ಸ್ಕೂಟರ್ ಗೆ ಸಿಟಿ ಬಸ್‌ ಢಿಕ್ಕಿ: ಯುವತಿ ಸಾವು

0
image_editor_output_image1539614299-1770260949291.jpg

ಮಂಗಳೂರು: ಸ್ಕೂಟರ್ ಗೆ ಸಿಟಿ ಬಸ್‌ವೊಂದು ಡಿಕ್ಕಿ ಹೊಡೆದು ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಮಂಗಳೂರಿನ ನಂತೂರು ವೃತ್ತದ ಬಳಿ ನಡೆದಿದೆ.

ಮೃತರನ್ನು ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಎಂದು ಗುರುತಿಸಲಾಗಿದೆ. ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ. ಬಸ್ ಮತ್ತು ಸ್ಕೂಟರ್ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಹೋಗುತ್ತಿದ್ದವು. ನಂತೂರು ಬಸ್‌ ನಿಲ್ದಾಣದ ಬಳಿ ಸ್ಕೂಟರ್ ಗೆ ಬಸ್ ಢಿಕ್ಕಿಯಾದ ಪರಿಣಾಮ ಸ್ಕೂಟರ್ ಬಸ್ ನಡಿ ಬಿದ್ದಿದೆ. ಈ ವೇಳೆ ಸಹಸವಾರೆಯ ಮೇಲೆಯೆ ಬಸ್ ನ ಟಯರ್ ಹರಿದು ಹೋಗಿತ್ತು. ಪರಿಣಾಮ ದೀಪ್ತಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!