ಗೃಹಲಕ್ಷ್ಮೀ ಯೋಜನೆಯ 2,000 ರೂ. ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ
ಬೆಳಗಾವಿ: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಹಣಕ್ಕಾಗಿ ಮೊಮ್ಮಗನೇ ಅಜ್ಜಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಅಜ್ಜಿ ಹಮ್ಮವ್ವ ಸನದಿ (78) ಅವರನ್ನು ಕೊಲೆ ಮಾಡಿದ ಆರೋಪಿ ಭೀಮಪ್ಪ ಸನದಿ, ಬಳಿಕ ಅವರ ಶವವನ್ನು ಗೋಣಿಚೀಲದಲ್ಲಿ ತುಂಬಿ ಬೈಕ್ಗೆ ಕಟ್ಟಿಕೊಂಡು ಸುಮಾರು 15 ಕಿಲೋಮೀಟರ್ ದೂರ ಸಾಗಿಸಿದ್ದಾನೆ. ನವೆಂಬರ್ 10ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಯಮಕನಮರಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಗೃಹಲಕ್ಷ್ಮೀ ಹಣದ ವಿಚಾರಕ್ಕೆ ಅಜ್ಜಿಯೊಂದಿಗೆ ಜಗಳ
ಅರಳಿಕಟ್ಟಿ ಗ್ರಾಮದ ಹಮ್ಮವ್ವ ಸನದಿ ಅವರು ನವೆಂಬರ್ 10ರಂದು ಪಾಶ್ಚಾಪುರ ಸಂತೆಗೆ ಹೋಗಿದ್ದವರು ನಾಪತ್ತೆಯಾಗಿದ್ದರು. ಈ ನಡುವೆ ಅಜ್ಜಿ ಹಮ್ಮವ್ವ ಅವರೊಂದಿಗೆ ಗೃಹಲಕ್ಷ್ಮೀ ಯೋಜನೆಯ ಹಣದ ವಿಚಾರವಾಗಿ ಮೊಮ್ಮಗ ಭೀಮಪ್ಪ ಜಗಳವಾಡಿದ್ದ ಎನ್ನಲಾಗಿದೆ. ಬೆಳ್ಳಿ ಆಭರಣಗಳನ್ನು ತರುವುದಾಗಿ ಹೇಳಿ ಅಜ್ಜಿಯನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದ ಭೀಮಪ್ಪ, ಕುಂದರಗಿ ಗ್ರಾಮದ ಸೊಸೈಟಿಯಲ್ಲಿ ಅವರಿಂದ ಹಣ ತೆಗೆಸಿಕೊಂಡಿದ್ದಾನೆ




