November 25, 2026

ಉಡುಪಿ: ಕಾಂಗ್ರೆಸ್ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿ ಬರುತ್ತಿದ್ದ ಬಸ್ ಅಪಘಾತ

0
image_editor_output_image-1936801988-1795582336750

ಉಡುಪಿ: ಕಾಂಗ್ರೆಸ್ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿ ವಾಪಸ್ ಮನೆಗೆ ಮರಳುತ್ತಿದ್ದ ಪ್ರವಾಸಿ ಬಸ್ಸೊಂದು ಅಪಘಾತಕ್ಕೀಡಾಗಿ ಹಲವರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಆನೆಗುಡ್ಡೆ ಗೋಪುರದ ಬಳಿ ನಡೆದಿದೆ.

ತ್ರಾಸಿಯಿಂದ ಸುಮಾರು 30 ಮಂದಿ ಪ್ರಯಾಣಿಕರನ್ನು ಕರೆದುಕೊಂಡು ಈ ಬಸ್ ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಗ್ಯಾರಂಟಿ ಸಮಾವೇಶಕ್ಕೆ ಬಂದಿತ್ತು. ಸಮಾವೇಶ ಮುಗಿದ ನಂತರ, ಊರಿಗೆ ಮರಳುವ ದಾರಿಯಲ್ಲಿ ಕುಂದಾಪುರ ಸಮೀಪದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಎಲ್ಲರೂ ಊಟ ಮುಗಿಸಿಕೊಂಡು ತ್ರಾಸಿಯತ್ತ ಹೊರಟಿದ್ದರು.
ದೇವಸ್ಥಾನದ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಬಂದು ಕುಂದಾಪುರದ ಕಡೆಗೆ ಹೋಗಲು ಚಾಲಕ ಬಸ್ಸನ್ನು ತಿರುಗಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

Leave a Reply

Your email address will not be published. Required fields are marked *

error: Content is protected !!