ಬಿ.ಜನಾರ್ದನ ಪೂಜಾರಿಯವರ ಅತ್ತೆ ನಿಧನ
ಮಂಗಳೂರು: ಕೇಂದ್ರದ ಮಾಜಿ ಸಚಿವರಾದ ಬಿ.ಜನಾರ್ದನ ಪೂಜಾರಿಯವರ ಅತ್ತೆ (ಪತ್ನಿಯ ತಾಯಿ) ಪುಷ್ಪಾವತಿ ಕಾರಂದೂರು (96) ಅವರು ವಯೋಸಹಜ ಖಾಯಿಲೆಯಿಂದ ಬುಧವಾರ (ಫೆ.4) ಮುಂಜಾನೆ ನಿಧನರಾದರು.
ಮೃತರು ಪುತ್ರರಾದ ವಕೀಲ ರಮಾನಾಥ ಕಾರಂದೂರು, ಡಾ.ದೇವದಾಸ್ ಕಾರಂದೂರು, ಉದ್ಯಮಿ ಸತೀಶ್ ಕಾರಂದೂರು, ಪುತ್ರಿಯರಾದ ಮಾಲತಿ ಜೆ. ಪೂಜಾರಿ, ಜಾನಕಿ ವಿಶ್ವನಾಥ್, ವಿಜಯ ಪ್ರಕಾಶ್ (ಶೀಲಾ), ಸೇರಿದಂತೆ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಫೆ.4ರಂದು ಸಂಜೆ 5:30ಕ್ಕೆ ಮಚ್ಚಿನ ಕಾರಂದೂರು ಮನೆಯಲ್ಲಿ ನಡೆಯಲಿದೆ.




