August 19, 2026

ವಿಟ್ಲ: ಹೆದ್ದಾರಿ ಬದಿಯಲ್ಲಿ ಹುಲ್ಲು-ಕೆಸರು ನೀರು ನಿಂತು ವಿದ್ಯಾರ್ಥಿಗಳಿಗೆ ತೊಂದರೆ: ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ ಒಕ್ಕೆತ್ತೂ ನಮ್ಮ ಗೆಳೆಯರು ಬಳಗದ ಸದಸ್ಯರು

0
image_editor_output_image-1093327020-1782981372945

ವಿಟ್ಲ: ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಒಕ್ಕೆತ್ತೂರು ಸೇತುವೆ ಬಳಿ ಕೆಸರು ನೀರು ತುಂಬಿ ವಿದ್ಯಾರ್ಥಿಗಳು ನಡೆದಾಡಲು ತೊಂದರೆ ಅನುಭವಿಸುತ್ತಿದ್ದು, ಒಕ್ಕೆತ್ತೂರು ನಮ್ಮ ಗೆಳೆಯರು ಬಳಗದ ಸದಸ್ಯರು ಶ್ರಮದಾನ ನಡೆಸುವ ಮೂಲಕ ಸ್ವಚ್ಛಗೊಳಿಸಿದರು.

ಒಕ್ಕ್ಕೆತ್ತೂರು ಜಂಕ್ಷನ್ ನಿಂದ ಹಿಡಿದು ಸೇತುವೆ ಕೊನೆವರೆಗೂ ಹುಲ್ಲು ಕೆಸರು ನೀರು ತುಂಬಿ ಶಾಲಾ ಹಾಗೂ ಮದರಸ ಮಕ್ಕಳಿಗೆ ನಡೆದಾಡಲು ತುಂಬಾ ಕಷ್ಟ ಪಡುತ್ತಿದ್ದರು. ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದೆ. ಪಾದಚಾರಿ ವಿದ್ಯಾರ್ಥಿಗಳು ಸಂಚರಿಸುವ ಹೆದ್ದಾರಿ ಬದಿ ಅಪಾಯವನ್ನು ಆಹ್ವಾನಿಸುತ್ತಿತ್ತು. ಮಕ್ಕಳು ಶಾಲೆ ಬಿಟ್ಟು ಮನೆಗೆ ಹೋಗಲು ಕಷ್ಟ ಪಡುವುದನ್ನು ನೋಡಿದ ನಮ್ಮ ಗೆಳೆಯರ ಬಳಗದ ಸದಸ್ಯರು
ಸ್ವಚ್ಛತಾ ಕಾರ್ಯಕ್ಕೆ ಇಳಿದು ಶ್ರಮದಾನ ಕಾರ್ಯ ಮಾಡಿದರು.

Leave a Reply

Your email address will not be published. Required fields are marked *

error: Content is protected !!