ವಿಟ್ಲ: ಅಕ್ರಮವಾಗಿ ಮರಳು ಸಾಗಾಟ: ಇಬ್ಬರು ಆರೋಪಿಗಳು ಮತ್ತು ಎರಡು ಟಿಪ್ಪರ್ ಲಾರಿಗಳು ವಶಕ್ಕೆ
ವಿಟ್ಲ: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ 2 ಟಿಪ್ಪರ್ ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜುಲೈ.4ರಂದು ರಂದು ಮಧ್ಯಾಹ್ನ ಬಂಟ್ವಾಳ ಕುಳ ಗ್ರಾಮದ ಓಜಾಲ ಎಂಬಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಕಾಶ ದೇವಾಡಿಗ ಅವರಿಗೆ ಮಾಹಿತಿ ಬಂದಿತ್ತು.
ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ KA-51-AA-3057 2 KA-21-C-6924 32 ಮರಳು ತುಂಬಿದ ಎರಡು ಟಿಪ್ಪರ್ ಲಾರಿಗಳು ಕಂಡುಬಂದಿವೆ.ವಿಚಾರಣೆ ವೇಳೆ ಲಾರಿಗಳ ಚಾಲಕರಾದ ಪುತ್ತೂರು, ಕೊಡಿಪಾಡಿ ನಿವಾಸಿ ಮೊಹಮ್ಮದ್ ಇರ್ಫಾನ್ (28) ಮತ್ತು ಪುತ್ತೂರು ಕಬಕ ನಿವಾಸಿ ನೌಷದ್ (26) ಅವರು ಸದ್ರಿ ಮರಳನ್ನು ಕಡಬ ತಾಲೂಕು ಅಲಂಕಾರ್ ಎಂಬಲ್ಲಿಂದ ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ ಕಳ್ಳತನದಿಂದ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದುದು ತಿಳಿದುಬಂದಿದೆ.
ಘಟನೆ ಸಂಬಂಧ ಎರಡು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 149/2026 3 303(2) BNS 2023, ៩០: 4(1), 4(1A), 21 MMDR (MINES AND MINERALS REGULATION OF DEVELOPMENT) ACT 1957, ៩໖໐: 3, 44 KARNATAKA MINOR MINERAL CONSISTENT RULE 1994 3 32 ನಡೆಸಲಾಗುತ್ತಿದೆ.




