July 4, 2026

ಕನ್ಯಾನ : ಕೆ. ಎಸ್ ಇಬ್ರಾಹಿಂ ಮದನಿ ಉಸ್ತಾದರ ಮೂವತ್ತಾರು ವರ್ಷಗಳ ಸೇವೆಗೆ ಶಿಷ್ಯವಂದನೆಯ ಗೌರವಾರ್ಪಣೆ

0
IMG-20260704-WA0099

ಜುಲೈ 3 : ಕನ್ಯಾನ ಜಮಾಅತ್ ಖಾಝಿಗಳಾಗಿದ್ದ ಮರ್ಹೂಂ ತಾಜುಲ್ ಉಲಮಾ ಉಳ್ಳಾಲ್ ತಂಗಳ್ ರವರ ನಿರ್ದೇಶನದಂತೆ  ಕನ್ಯಾನ ಜಮಾಅತ್ ನಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪ್ರೀತಿಯ ಚೆರಿಯುಸ್ತಾದರಿಗೆ ಜುಲೈ 2 ರಂದು ಕನ್ಯಾನ ರಹ್ಮಾನಿಯಾ ಜುಮಾ ಮಸೀದಿಯಲ್ಲಿ ಗೌರವಾರ್ಪಣೆ ಮಾಡಲಾಯಿತು

ಒಬ್ಬ ಗುರು ಕೇವಲ ಪಾಠ ಹೇಳುವವರಲ್ಲ; ಅವರು ಮೌಲ್ಯಗಳನ್ನು ಬೆಳೆಸುವವರು, ವ್ಯಕ್ತಿತ್ವವನ್ನು ರೂಪಿಸುವವರು ಮತ್ತು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡುವವರು. ಅಂತಹ ಆದರ್ಶ ಗುರುವೊಬ್ಬರ
ಮೂವತ್ತಾರು ವರ್ಷಗಳ ಈ ಪಯಣದಲ್ಲಿ ಅವರು ಅನೇಕ ಶಿಷ್ಯರಿಗೆ ಧಾರ್ಮಿಕ ಜ್ಞಾನ, ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಸಮಾಜದ ಬಗ್ಗೆ ಕಾಳಜಿಯನ್ನು ಬೋಧಿಸಿದ್ದಾರೆ. ಅವರ ಪ್ರೀತಿ, ತಾಳ್ಮೆ, ಸರಳತೆ ಮತ್ತು ನಿಸ್ವಾರ್ಥ ಸೇವೆಯ ಫಲವಾಗಿ ಅನೇಕ ಕುಟುಂಬಗಳು ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸದೃಢವಾಗಿವೆ.

ಗುರುವಿನ ಸೇವೆ ಎಂದರೆ  ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಮಹತ್ತರ ಜವಾಬ್ದಾರಿಯಾಗಿದೆ. ಆ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿದ ನಮ್ಮ ಗೌರವಾನ್ವಿತ ಚೆರಿಯುಸ್ತಾದ್ ರವರ ಸೇವೆ ಸದಾ ಸ್ಮರಣೀಯವಾಗಿದೆ.

ಇಂದು ಶಿಷ್ಯವೃಂದವು ಈ ಗೌರವಾರ್ಪಣೆಯ ಮೂಲಕ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ. ಇದು ಕೇವಲ ಒಂದು ಸನ್ಮಾನವಲ್ಲ, ಗುರುಗಳ ಅಪಾರ ತ್ಯಾಗ, ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಗೆ ಸಲ್ಲಿಸುವ ಪ್ರೀತಿಯ ನಮನವಾಗಿದೆ.

ಕನ್ಯಾನ ಕೇಂದ್ರ ಜುಮಾ ಮಸ್ಜಿದ್ ಧರ್ಮಗುರು ಕೆ.ಎಂ ಇಬ್ರಾಹಿಂ ಫೈಝಿ ಜಮಾಅತ್ ಉಪಾಧ್ಯಕ್ಷ ಹಾಜಿ ಎಂ.ಕೆ ಮಹಮ್ಮದ್ ಕುಂಞ ಸದರ್ ಉಸ್ತಾದ್ ಹೈದರಲಿ ಸಅದಿ ಸಹಿತ ಜಮಾಅತ್ತರು ಮತ್ತು ಶಿಷ್ಯ ವೃಂದ ಉಪಸ್ಥಿತರಿದ್ದರು
ಶಿಷ್ಯವೃಂದದ ವತಿಯಿಂದ 2,65,313 ರೂ ಗಳನ್ನು ಉಸ್ತಾದರಿಗೆ ಹಸ್ತಾಂತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!