July 5, 2026

ವಡಗರ ಯೂತ್ ಫ್ರೇಂಡ್ಸ್ ಗೋಳ್ತಮಜಲು ವತಿಯಿಂದ ರಕ್ತದಾನ ಶಿಬಿರ:ಸಮಾಜಸೇವೆಯಿಂದಲೇ  ಪುಣ್ಯಗಳಿಸಿರಿ: ಮುನ್ವವರ ಬಾಖವಿ.          

0
IMG-20260705-WA0087

ಮೋಜು ಮಸ್ತಿಗೆ  ಬಲಿಯಾಗುವ ಯುವ ಸಮೂಹ ಸಮಾಜಸೇವೆಯ  ಮಾನವೀಯತೆಯ ಮಮತೆಯ ಕರುಣೆಯ ದಾರಿ  ಕಂಡು ಕೊಳ್ಳುವುದು ಉತ್ತಮ ಲಕ್ಷಣ ಪುಣ್ಯದಾಯಕ  ಎಂದು ಗೋಳ್ತಮಜಲು ರಹ್ಮಾನಿಯ ಜುಮಾ ಮಸೀದಿಯ ಖತೀಬ್ ಮುನವ್ವರ ಬಾಖವಿ ಅಭಿಪ್ರಾಯಪಟ್ಟರು.

ಅವರು ಇಂದು ಇಪ್ಪತೈದು ವರ್ಷಗಳನ್ನು ಪೂರೈಸಿದ ವಡಗರ ಯೂತ್ ಫ್ರೇಂಡ್ಸ್ ಗೋಳ್ತಮಜಲು ಹಾಗೂ ಬ್ಲಡ್ ಡೊನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಯೊನಪೋಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಗೋಳ್ತಮಜಲು ಆರ್ಶಧಮ ಸಂಕೀರ್ಣದಲ್ಲಿ ಸಾರ್ವಜನಿಕ ಬ್ರಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಹಾಜಿ. ಮೊಹಮ್ಮದ್ ಹನೀಫ್ ಗೋಳ್ತಮಜಲು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಪದ್ಮನಾಭ ರೈ, ಆರ್ಶಧಾಮ ವಾಣಿಜ್ಯ ಸಂಕೀರ್ಣದ ಮಾಲೀಕರಾದ ಸುಂದರ ಶೆಟ್ಟಿ ಗೋಳ್ತಮಜಲು, ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಕಾರ್ಯದರ್ಶಿ ಸಿದ್ದೀಕ್ ಪನಾಮ,ಬ್ಲಡ್ ಡೊನರ್ಸ್  ಸ್ಥಾಪಕಾಧ್ಯಕ್ಷರಾದ  ಸಿದ್ದೀಕ್ ಮಂಜೇಶ್ವರ, ಯನೋಪೋಯ ಆಸ್ಪತ್ರೆ ವೈದ್ಯರಾದ ಸೈಯದ್, ಇಂತಿಯಾಝ್ ಗೋಳ್ತಮಜಲು, ಮೊಹಮ್ಮದ್ ಶರೀಫ್ ಹಜಾಜ್,ಕುಂಞಮೋನಾಕ,ನವಾಝ್ ದುಬಾಯಿ, ವಡಗರ ಯೂತ್ ಫ್ರೇಂಡ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ    ಸವೂದ್ ವೀರಕಂಭ,         ಅಧ್ಯಕ್ಷರಾದ ಆಸಿಫ್ ಗೋಳ್ತಮಜಲು,ಬ್ಲಡ್ ಡೊನರ್ಸ್  ಅಡ್ಮಿನ್   ಜಮಾಲ್, ಅಶ್ಅರ್, ಇಮ್ರಾನ್ ,ಸಿದ್ದೀಕ್,   ಉಪಸ್ಥಿತರಿದ್ದರು. ಉರಗ ತಜ್ಞ ಕಬೀರ್ ಕಲ್ಲಡ್ಕ, ಹಾಗೂ ದ್ವಿಚಕ್ರ ವಾಹನದಲ್ಲಿ ಕಾಶ್ಮೀರ ಪ್ರವಾಸ ಗೈದ ಮೊಹಮ್ಮದ್ ಫತ್ತಾಹ್, ಮೊಹಮ್ಮದ್ ಫಹೀಂ ಇವರನ್ನು ಅಭಿನಂದಿಸಲಾಯಿತು. ಅಬ್ದುಲ್ ಹಮೀದ್ ಗೋಳ್ತಮಜಲು ಸ್ವಾಗತಿಸಿ ವಂದಿಸಿದರು…,

Leave a Reply

Your email address will not be published. Required fields are marked *

error: Content is protected !!