February 2, 2026

ಹಾಲಿವುಡ್ ನ ಖ್ಯಾತ ನಟ ಆತ್ಮಹತ್ಯೆ

0
image_editor_output_image-1143529808-1671198297892.jpg

ಅಮೇರಿಕಾ: ಹಾಲಿವುಡ್ ನ ಖ್ಯಾತ ನಟ, ಡ್ಯಾನ್ಸರ್, ಹಾಗೂ ಡಿಜೆ ಸ್ಟೀಫನ್ ಬಾಸ್ ಮೃತಪಟ್ಟಿದ್ದಾರೆ. ಸ್ಟೀಫನ್ ಬಾಸ್ (40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ಡಿ. 13 ರಂದು ಅವರ ಮೃತದೇಹ ಹೋಟೇಲ್ ಕೋಣೆಯಲ್ಲಿ ಪತ್ತೆಯಾಗಿದೆ.

ಸ್ಟೀಫನ್ ಬಾಸ್ ಸೋಮವಾರ (ಡಿಸೆಂಬರ್ 12) ಒಂದು ರಾತ್ರಿ ತಂಗಲು ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ್ದಾರೆ. ಈ ಹೋಟೆಲ್ ತಮ್ಮ ಪತ್ನಿ ಆಲಿಸನ್ ಹೋಲ್ಕರ್ ಮತ್ತು ಅವರ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಒಂದು ಮೈಲಿಗಿಂತಲೂ ಕಡಿಮೆ ಅಂತರದಲ್ಲಿತ್ತು.

ಅವರು ಚೆಕ್-ಔಟ್ ಸಮಯ ಮೀರಿದ್ದರಿಂದ ಕೊಠಡಿಗೆ ಹೊಟೇಲ್ ಸಿಬ್ಬಂದಿಗಳು ವಿಚಾರಿಸಲು ಹೋದಾಗ ತಲೆಗೆ ಗುಂಡೇಟು ಹೊಡೆದುಕೊಂಡ ಸ್ಥಿತಿಯಲ್ಲಿ ಬಾತ್ ರೂಂ ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!