February 3, 2026
image_editor_output_image1951383327-1671197309513.jpg

ದಾವಣಗೆರೆ: ಆ ದಂಪತಿಗಳು ಶಿಕ್ಷಕರು. ತಮ್ಮ ಮಗನನ್ನು ಉನ್ನತ ವ್ಯಾಸಂಗಕ್ಕೆ ಜರ್ಮನಿಗೆ ಕಳಿಸಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು.

ಮೊಬೈಲ್ ಸ್ಫೋಟಗೊಂಡು ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಮಗಮೃತಪಟ್ಟಿದ್ದಾನೆ. ದಾವಣಗೆರೆ ಸರಸ್ವತಿ ನಗರದ ನಿವಾಸಿ ಶಿಕ್ಷಕ ದಂಪತಿ ರೇವಣಸಿದ್ದಪ್ಪ ಹಾಗೂ ಇಂದಿರಮ್ಮ ಅವರ ಪುತ್ರ ಸಂತೋಷ್ (30) ಮೃತಪಟ್ಟ ಯುವಕ.

ಮೃತ ಸಂತೋಷ್ ಜರ್ಮನಿಯ ಚೆಮ್ನಿಟ್ಜ್ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಎಂಟೆಕ್ ವಿದ್ಯಾಭ್ಯಾಸ ಮಾಡಲು 2017ರಲ್ಲಿ ತೆರಳಿದ್ದ.

ನಂತರ ಕೆಲ ದಿನಗಳ ಹಿಂದಷ್ಟೇ ದಾವಣಗೆರೆಯಿಂದ ಜರ್ಮನಿಗೆ ತೆರಳಿದ್ದ ಸಂತೋಷ್, ಕೇಮ್ನಿಟ್ಜ್ ನಗರದಲ್ಲಿ ವಾಸವಿದ್ದ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!