ಗುಂಡಿಕ್ಕಿ ವಕೀಲ ಮಂಜುನಾಥ್ ಹತ್ಯೆ
ಬೆಂಗಳೂರು: ವಕೀಲರೊಬ್ಬರಿಗೆ ಗುಂಡಿಟ್ಟು ಹತ್ಯೆಗೈದಿರುವ ಆತಂಕಕಾರಿ ಘಟನೆಯೊಂದು ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಬಳಿಕ ಸುತ್ತಮುತ್ತಲಿನ ಪ್ರದೇಶದ ಜನ ಆತಂಕಗೊಂಡಿದ್ದಾರೆ.
ಮಂಜುನಾಥ್ ಮೃತಪಟ್ಟ ವಕೀಲರು. ಮಂಜುನಾಥ್ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಬಿಹಾರ ಮೂಲದ ವ್ಯಕ್ತಿಗಳಿಂದಲೇ ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಅಲ್ಲದೇ ಬಾಡಿಗೆ ವಿಚಾರಕ್ಕೆ ಕಿರಿಕ್ ಆಗಿದೆ ಅನ್ನೋ ಶಂಕೆಯೂ ಇದೆ.



