October 19, 2026

ಉಪ್ಪಿನಂಗಡಿ: ತಲವಾರು, ಬಿಯರ್ ಬಾಟಲಿ ಹಿಡಿದು ತಂಡಗಳ ನಡುವೆ ಗಲಾಟೆ

0
image_editor_output_image-1306112714-1792384648553

ಉಪ್ಪಿನಂಗಡಿ: ತಲವಾರು ಹಾಗೂ ಬಿಯರ್ ಬಾಟಲಿ ಹಿಡಿದು ಎರಡು ತಂಡಗಳು ಗಲಾಟೆ ನಡೆಸಿದ ಘಟನೆ ರಾತ್ರಿ ಉಪ್ಪಿನಂಗಡಿಯ ಕಾರ್ತಿಕ್ ಬಾ‌ರ್ ಎದುರು ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಇಳಂತಿಲದ ಮಂಜುನಾಥ ಹಾಗೂ ಕರ್ವೇಲ್‌ನ ವಿಶ್ವನಾಥ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಕರ್ವೇಲ್‌ನ ಮುನ್ನ ಎಂಬಾತ ಪರಾರಿಯಾಗಿದ್ದಾನೆ.

ಮದ್ಯ ಸೇವಿಸಿದ್ದರೆನ್ನಲಾದ ಈ ತಂಡ ಬಾರ್‌ನ ಹೊರಗಡೆ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಗಲಾಟೆ ನಡೆಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಎನ್ನಲಾಗಿದೆ. ಈ ವೇಳೆ ಮಂಜುನಾಥ ತಲವಾರು ಝಳಪಿಸುತ್ತಿದ್ದರೆ, ಮುನ್ನ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡಿದ್ದ.

ಗಲಾಟೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಪೊಲೀಸರು, ಮಂಜುನಾಥನನ್ನು ಹಿಡಿದು ಕೈಯಲ್ಲಿದ್ದ ತಲವಾರನ್ನು ವಶಕ್ಕೆ ಪಡೆಯುವಲ್ಲಿ ಅಸ್ವಿಯಾಗಿದ್ದಾರೆ. ಆದರೆ, ಪೊಲೀಸರನ್ನು ಕಂಡ ಮುನ್ನ ಸ್ಥಳದಿಂದ ಪರಾರಿಯಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!