October 20, 2026

ಟೈಗರ್‌ ಶ್ರಾಫ್‌  ಗುಂಡಿನ ದಾಳಿ ಪ್ರಕರಣ: ಮೂವರು ಶೂಟರ್‌ಗಳ ಬಂಧನ

0
image_editor_output_image1398490294-1792392626764

ಮುಂಬಯಿ: ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಮೇಲಿನ ಗುಂಡಿನ ದಾಳಿ ಪ್ರಕರಣ ಸಂಬಂಧ ಪೊಲೀಸರು ಮೂವರು ಶಂಕಿತ ಶೂಟರ್‌ಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ರಾಜಸ್ಥಾನದ ಕೋಟಾದಲ್ಲಿ ಮೂವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಫುಲ್‌ ಸಿಂಗ್‌, ಹೃತಿಕ್‌ ಕುಮಾರ್‌, ರೆಹಾನ್‌ ಎನ್ನುವವರನ್ನು ಬಂಧಿಸಿಲಾಗಿದ್ದು, ಇದರಲ್ಲಿ ಇಬ್ಬರು ಹರಿಯಾಣದ ಸೋನಿಪತ್‌ ಮೂಲದವರಾಗಿದ್ದಾರೆ. ಒಬ್ಬಾತ ಬಿಹಾರದ ಬೇಗುಸರಾಯ್ ಮೂಲದವನು ಎಂದು ತಿಳಿದು ಬಂದಿದೆ.

ಭಾನುವಾರ (ಅ.18) ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಫುಟ್‌ ಬಾಲ್‌ ಆಡಿ ವಾಪಾಸ್‌ ಆಗುತ್ತಿದ್ದ ವೇಳೆ ನಟ ಟೈಗರ್‌ ಶ್ರಾಫ್‌ ಅವರ ಕಾರಿನ ಮೇಲೆ ಮೂವರು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿಯನ್ನು ನಡೆಸಿದ್ದರು.

Leave a Reply

Your email address will not be published. Required fields are marked *

error: Content is protected !!