May 11, 2026

ಸೈರನ್ ಹಾಕಿ ಹೋಗುತ್ತಿದ್ದ ಆ್ಯಂಬ್ಯುಲೆನ್ಸ್ ನ್ನು ಅನುಮಾನದ ಮೇರೆಗೆ ತಡೆದ ಪೊಲೀಸರು: ಬರೋಬ್ಬರಿ 14 ಕೋಟಿ.ರೂ ಮೌಲ್ಯದ ಡ್ರಗ್ಸ್ ವಶಕ್ಕೆ

0
image_editor_output_image-126708629-1670990987711.jpg

ಅಸ್ಸಾಂ: ಅಂಬ್ಯುಲೆನ್ಸ್ ನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ 14 ಕೋಟಿ.ರೂ ಮೌಲ್ಯದ ಡ್ರಗ್ಸನ್ನು ಗುವಾಹಟಿ ಪೊಲೀಸರು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಗುಪ್ತ ಮಾಹಿತಿಯನ್ನು ಆಧಾರಿಸಿ ಗುವಾಹಟಿ ನಗರ ಪೊಲೀಸ್ ಜಂಟಿ ಆಯುಕ್ತ ಪಾರ್ಥ ಸಾರಥಿ ಮಹಾಂತ ಮತ್ತು ಎಡಿಸಿಪಿ ಕಲ್ಯಾಣ್ ಪಾಠಕ್ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, 50,000 ನಿಷೇಧಿತ ಮಾತ್ರೆ, 200 ಗ್ರಾಂ ಹೆರಾಯಿನ್ ಗಳನ್ನು ವಶಕ್ಕೆ ಪಡೆದು, ಅಂಬ್ಯುಲೆನ್ಸ್ ಚಾಲಕ ಮಿರಾಜೌಲ್ ಇಸ್ಲಾಂ ಎಂಬಾತನನ್ನು ಬಂಧಿಸಿದೆ.

ಎಂಎನ್-03ಸಿ-0037 ನೋಂದಣಿ ಸಂಖ್ಯೆಯ ಆಂಬ್ಯುಲೆನ್ಸ್ ಮಣಿಪುರದಿಂದ ಬರುತ್ತಿತ್ತು. ನಾವು 50,000 ನಿಷೇಧಿತ ಮಾತ್ರೆ, 200 ಗ್ರಾಂ ಹೆರಾಯಿನ್ ಗಳನ್ನು ವಶಕ್ಕೆ ಪಡೆದು, ಅಂಬ್ಯುಲೆನ್ಸ್ ಚಾಲಕ ಮಿರಾಜೌಲ್ ಇಸ್ಲಾಂ ಎಂಬಾತನನ್ನು ಬಂಧಿಸಿದ್ದೇವೆ. ಇದರ ಒಟ್ಟು ಮೌಲ್ಯ 14.10 ಕೋಟಿ ರೂ. ಆಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಾಂತ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!