ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಸಾವು
ಬೆಳಗಾವಿ: ಮಾನಸಿಕ ಅಸ್ವಸ್ತ ರೋಗಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ರಾಮದುರ್ಗ ಪಟ್ಟಣದ ಖಾಸಗಿ ಲಾಡ್ಜ್‌ನಲ್ಲಿ ನಡದಿದೆ.
ಮೃತನನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಯಲ್ಲಪ್ಪ ತಿರ್ಲಾಪುರ ಎಂದು ಗುರುತಿಸಲಾಗಿದೆ.
ಯಲ್ಲಪ್ಪ ಕಳೆದ 15 ರಿಂದ 20 ದಿನಗಳ ಹಿಂದೆ ಚಿತ್ತರಗಿಯಿಂದ ಕಾಣೆಯಾಗಿದ್ದ ಎಂದು ಅವನ ಸಂಬಂಧಿಕರು ತಿಳಿಸಿದ್ದರು. ಈಗ 2-3 ದಿನದಿಂದ ಯಲ್ಲಪ್ಪ ರಾಮದುರ್ಗ ಪಟ್ಟಣದ ಹಳೆಯ ಬಸ್‌ಸ್ಟ್ಯಾಂಡ್ ಪಕ್ಕದಲ್ಲಿದ್ದ ನಾಯಕ ಲಾಡ್ಜನಲ್ಲಿದ್ದು, ಕಾಲ ಕಳೆಯುತ್ತಿದ್ದ ಎಂದು ತಿಳಿದು ಬಂದಿದೆ.




