March 20, 2026

ಕಾಸರಗೋಡು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದ ಬಸ್: 15 ಕ್ಕೂ ಹೆಚ್ಚು ಮಂದಿಗೆ ಗಾಯ

0
IMG-20221201-WA0036.jpg

ಕಾಸರಗೋಡು: ಮಂಜೇಶ್ವರ ಸಮೀಪದ ಪೊಸೊಟ್ ನಲ್ಲಿ ಕೆಎಸ್‌ಆರ್‌‌ಟಿಸಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮಗುಚಿ ಬಿದ್ದ ಘಟನೆ ಇಂದು ಸಂಜೆ ನಡೆದಿದ್ದು, ಘಟನೆಯಲ್ಲಿ 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೇರಳ ಮಲಬಾರ್ ಬಸ್ಸು ಪೊಸೋಟ್ ಪೆಟ್ರೋಲ್ ಪಂಪ್ ಬಳಿ ಪಲ್ಟಿ ಹೊಡೆದಿದೆ.

ಇನ್ನು ಅಪಘಾತವಾದ ಬಸ್ಸಿನಲ್ಲಿ 40 ಕ್ಕೂಅಧಿಕ ಪ್ರಯಾಣಿಕರಿದ್ದು, ಬಸ್ಸಿನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ನಾಗರಿಕರು, ಪೊಲೀಸರು ಹೊರತೆಗೆದು ಆಸ್ಪತ್ರೆಗೆ ತಲುಪಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!