ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ಕಾಟ: ಓರ್ವರಿಗೆ ಕಚ್ಚಿದ ನಾಯಿ: ಭಕ್ತಾದಿಗಳಿಗೆ, ವಾಹನ ಸವಾರರಿಗೆ ತೊಂದರೆ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ಬೀದಿ ನಾಯಿಗಳು ಹೆಚ್ಚಾಗಿ ಕಂಡುಬರುತ್ತಿದ್ದು ಭಕ್ತಾದಿಗಳಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗಿದೆ.
ಇಂದು ಮುಂಜಾನೆ ದೇವಸ್ಥಾನದ ಒಳಗಡೆ ಧರ್ಮಸಮ್ಮೇಳನ ಮಂಟಪದಲ್ಲಿ ಹಾಸನಮೂಲದ ವ್ಯಕ್ತಿಯ ಕೈಗೆ ಬೀದಿನಾಯಿ ಕಚ್ಚಿದ ಪರಿಣಾಮ ವ್ಯಕ್ತಿಯ ಕೈಗೆ ಬಲವಾದ ಗಾಯವಾಗಿದ್ದು ಇವರನ್ನು ಸಾಮಾಜ ಸೇವಕ ರವಿಕಕ್ಕೆಪದವು ಮತ್ತಿತರರು ಸೇರಿ ಕಡಬದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಸುಬ್ರಹ್ಮಣ್ಯದಲ್ಲಿ ಬೀದಿನಾಯಿಗಳ ಅಟ್ಟಹಾಸ ಹಾಗೂ ಹೋರಿಗಳ ಹಾವಳಿಯಿಂದ ಹಲವಾರು ವಾಹನಗಳಿಗೆ ಹಾಗೂ ಇತ್ತೀಚೆಗೆ ಶಾಲಾ ವಿಧ್ಯಾರ್ಥಿಗೆ, ಸರ್ಪಸಂಸ್ಕಾರ ಅರ್ಚಕರಿಗೆ ಹಾನಿ ಉಂಟಾಗಿದ್ದು ನಿನ್ನೆಯದಿನ ರಸ್ತೆಗೆ ಬೀದಿನಾಯಿ ಅಡ್ಡಬಂದ ಪರಿಣಾಮ ಜಗದೀಶ್‌ಕಿಲ್ರ‍್ಕಜೆ ಎಂಬವರ ಆಟೋರಿಕ್ಷಾ ಪಲ್ಟಿಯಾಗಿರುವ ಘಟನೆಯೊಂದು ನಡೆದಿದ್ದು ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ.
ಒಂದು ವಾರದ ಹಿಂದೆಯಷ್ಟೇ ಹೊಸದಾಗಿ ಖರೀದಿಸಿದಂತ ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದೆ,ಇದರ ಬಗ್ಗೆ ಅಟೋ ರಿಕ್ಷಾ ಚಾಲಕರು ಹಾಗೂ ಗ್ರಾಮಸ್ಥರು ಹಲವಾರು ಬಾರಿ ಪಶು ವೈಧ್ಯಾಧಿಕಾರಿಗಳಿಗೆ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿಮಾಡಿದ್ದು ಸುಬ್ರಹ್ಮಣ್ಯದಲ್ಲಿ ಪಶು ವೈಧ್ಯಾಧಿಕಾರಿ ನೇಮಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ಗಂಟೆಗಳ ವೈದ್ಯಕೀಯ ಸೇವೆ ಕಲ್ಪಿಸಬೇಕೆಂದು ಸಮಾಜಸೇವಕ ರವಿಕಕ್ಕೆ ಪದವು ಆಟೋ ಚಾಲಕ ಮಾಲಕರಾದಂತ ಡಿ.ಶೇಶಕುಮಾರ್ ಶೆಟ್ಟಿ, ದಿನೇಶ್ ಶೀರಾಡಿ, ರಾಧಕೃಷ್ಣ,ಯಶೋಧರ ಮಾಧ್ಯಮದ ಜೊತೆ ಮಾತನಾಡಿದರು.






