March 20, 2026

ವಿದೇಶಿ ಮಹಿಳಾ ಯೂಟ್ಯೂಬರ್‌‌ಗೆ ನಡುಬೀದಿಯಲ್ಲೇ ಕಿರುಕುಳ: ಇಬ್ಬರು ಯುವಕರ ಬಂಧನ

0
IMG-20221201-WA0035.jpg

ಮುಂಬೈ: ದಕ್ಷಿಣ ಕೊರಿಯಾದ ಯೂಟ್ಯೂಬರ್ ಯುವತಿಯೊಬ್ಬರಿಗೆ ಮುಂಬೈನ ರಸ್ತೆಯಲ್ಲಿ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಬುಧವಾರ ರಾತ್ರಿ 8ಗಂಟೆಗೆ ಮುಂಬಯಿಯ ಖಾರ್ ಪ್ರದೇಶದಲ್ಲಿ ದಕ್ಷಿಣ ಕೊರಿಯಾದ ಯುವತಿ ಲೈವ್ ಸ್ಟ್ರೀಮ್ ಮಾಡುತ್ತಿದ್ದಾಗ ಇಬ್ಬರು ಯುವಕರು ಆಕೆಯ ಬಳಿ ಬಂದಾಗ ಅದರಲ್ಲೊಬ್ಬಾತ ಯುವತಿಯ ಕೈಹಿಡಿದು ಬಲವಂತವಾಗಿ ಎಳೆದೊಯ್ದಿದ್ದ. ಆದರೆ ಆಕೆ ತೀವ್ರ ವಿರೋಧ ವ್ಯಕ್ತಪಡಿಸಿ ಮುಂದೆ ನಡೆದು ಹೋಗುತ್ತಿರುವ ದೃಶ್ಯದ ವಿಡಿಯೋವನ್ನು ಟ್ವೀಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದರು.

ಇನ್ನು ಈ ವಿಡಿಯೋಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದ್ದು, ಯುವಕರನ್ನು ಬಂಧಿಸಬೇಕೆಂದು ಅನೇಕರು ಆಗ್ರಹಿದ್ದು, ಇದೀಗ ಇಬ್ಬರು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!