March 20, 2026

ಮಂಗಳೂರು: ಆಟೋ ರಿಕ್ಷಾ ಪ್ರಯಾಣಕ್ಕೆ ಬಾಡಿಗೆ ದರ ಹೆಚ್ಚಳ, ಇಂದಿನಿಂದ ಪರಿಷ್ಕೃತ ಜಾರಿಗೆ

0
image_editor_output_image147372371-1669893263264.jpg

ಮಂಗಳೂರು: ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ಪ್ರಯಾಣಕ್ಕೆ ಸಂಬಂಧಿಸಿ ಪರಿಷ್ಕೃತ ಬಾಡಿಗೆ ದರ ಇಂದಿನಿಂದ ಜಾರಿಗೆ ಬಂದಿದೆ. ಈಗ ಕನಿಷ್ಟ ದರ ಆಂದರೆ ಮೊದಲ ಒಂದುವರೆ ಕಿಲೋ ಮೀಟರಿಗೆ 35 ರೂಪಾಯಿ ಹಾಗೂ ನಂತರದ ಪ್ರತಿ 1 ಕಿಲೋ ಮೀಟರಿಗೆ 20 ರೂಪಾಯಿ ದರವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿಗದಿಪಡಿಸಿದೆ.

ಪರಿಷ್ಕೃತ ಬಾಡಿಗೆ ದರವನ್ನು ರಿಕ್ಷಾಗಳ ಡಿಜಿಟಲ್‌ ಮೀಟರ್‌ಗಳಲ್ಲಿ ನಮೂದಿಸುವ ಪ್ರಕ್ರಿಯೆ ಮಂಗಳೂರಿನಲ್ಲಿ ಆರಂಭವಾಗಿದ್ದು, ರಿಕ್ಷಾ ಚಾಲಕರೆಲ್ಲ ಇಂದು ಈ ಕಾಯಕದಲ್ಲಿ ನಿರತರಾಗಿದ್ದರು.

ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಪರವಾನಿಗೆ ಪಡೆದ ಮೀಟರ್‌ ದುರಸ್ತಿ ಸಂಸ್ಥೆಗಳ ಮುಂಭಾಗದಲ್ಲಿ ಇಂದು ರಿಕ್ಷಾ ಚಾಲಕ ಮಾಲಕರ ದಂಡೇ ಸೇರಿತ್ತು.

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ರಿಕ್ಷಾಗಳ ಡಿಜಿಟಲ್‌ ಮೀಟರ್‌ ಗಳ ಕ್ಯಾಲಿಬರೇಶನ್‌, ವೇರಿಫಿಕೇಶನ್‌ ಮತ್ತು ಸ್ಟ್ಯಾಂಪಿಂಗ್‌ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಿದರು.

ಇಲಾಖೆಯ ಅಧಿಕಾರಿಗಳು ರಿಕ್ಷಾದಲ್ಲಿ ಪ್ರಯಾಣಿಸಿ ಬೆಂಚ್‌ ಟೆಸ್ಟ್‌ ಮತ್ತು ರೋಡ್‌ ಟೆಸ್ಟ್‌ ನಡೆಸಿ ಮುದ್ರೆ ಹಾಕಿ ಸತ್ಯಾಪನ ಪ್ರಮಾಣ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮಂಗಳೂರಿನ ಸಹಾಯಕ ನಿಯಂತ್ರಕ ಕುಲಕರ್ಣಿ ಅವರು ಡಿಜಿಟಲ್‌ ಮೀಟರ್‌ ಗಳ ಕ್ಯಾಲಿಬರೇಶನ್‌, ವೇರಿಫಿಕೇಶನ್‌ ಮತ್ತು ಸ್ಟ್ಯಾಂಪಿಂಗ್‌ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!