March 20, 2026

ಸ್ಕೂಟಿಯಲ್ಲಿ ಹೆಲ್ಮೆಟ್‌ ಇಲ್ಲದೇ ತ್ರಿಬಲ್‌ ರೈಡಿಂಗ್‌: ಮಹಿಳಾ ಪೊಲೀಸ್‌ ಪೇದೆಯನ್ನು ತರಾಟೆಗೆ ತೆಗೆದುಕೊಂಡ ಮಹಿಳೆ

0
image_editor_output_image1436963906-1669892811077.jpg

ಬೆಂಗಳೂರು: ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೆ ಬುದ್ದಿಮಾತು ಹೇಳಿ ಜಾಗೃತಿ ಮೂಡಿಸಬೇಕಾದ ಪೊಲೀಸ್‌ ಇಲಾಖೆಯವರೇ ತಪ್ಪು ಮಾಡಿ ಟೀಕೆಗೆ ಗುರಿಯಾಗಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಸ್ಕೂಟಿಯಲ್ಲಿ ಹೆಲ್ಮೆಟ್‌ ಕೂಡ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸ್‌ ಪೇದೆಗಳಿಗೆ ಮಹಿಳೆಯೊಬ್ಬರು ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಮೂವರು ಮಹಿಳಾ ಪೊಲೀಸ್‌ ಪೇದೆಗಳು ಹೆಲ್ಮೆಟ್‌ ಇಲ್ಲದೇ ಸ್ಕೂಟಿಯಲ್ಲಿ ತ್ರಿಬಲ್‌ ರೈಡಿಂಗ್‌ ಬಂದಿದ್ದಾರೆ. ಮತ್ತೊಂದು ಸ್ಕೂಟಿಯಲ್ಲಿ ಇನ್ನಿಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ. ಇದನ್ನು ಗಮನಿಸಿದ ಮಹಿಳೆಯೊಬ್ಬರು, “ರೂಲ್ಸ್ ಮಾಡೊರೂ ನೀವೇ.. ಬ್ರೇಕ್ ಮಾಡೊರೂ ನೀವೇ..ʼ ಅಂತಾ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ದೃಶ್ಯವನ್ನು ವೀಡಿಯೋ ಕೂಡ ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!