ಕಲ್ಲಡ್ಕ: ಅಲ್ ಬಿರ್ರ್ ವಿದ್ಯಾಸಂಸ್ಥೆಗೆ ಆಬೀದ್ ಬಹದ್ದೂರ್ ಅವರಿಂದ ಶಾಲಾ ವಾಹನ ಕೊಡುಗೆ: ಆಗಸ್ಟ್ 14ರಂದು ಲೋಕಾರ್ಪಣೆ ಸಮಾರಂಭ
ಕಲ್ಲಡ್ಕ: ಅಲ್ ಬಿರ್ರ್ ವಿದ್ಯಾಸಂಸ್ಥೆಗೆ ಶಾಲಾ ವಾಹನ ಕೊಡುಗೆ ನೀಡಿದ ಆಬಿದ್ ಬಹದ್ದೂರ್ ಮೊಹಿಯುದ್ದೀನ್ ಜುಮಾ ಮಸೀದಿ ಕಲ್ಲಡ್ಕ ಇದರ ಅದೀನದಲ್ಲಿ ಕಳೆದ ವರ್ಷ ಆರಂಭಗೊಂಡ M.J.M ಅಲ್ ಬಿರ್ರ್. ಶಾಲೆಗೆ ಶಾಲಾ ವಾಹನದ ಅಗತ್ಯತೆ ಮನಗಂಡ ಬಹದ್ದೂರ್ ಟೂರ್ಸ್ ಎಂಡ್ ಟ್ರಾವೆಲ್ಸ್ ಮಾಲಿಕರೂ ಯುವ ಉದ್ಯಮಿಯೂ ಶಿಕ್ಷಣ ಪ್ರೇಮಿಯೂ ಕೊಡುಗೈ ದಾನಿಯೂ ಆದ ಇವರ ಉದಾರ ಮನಸ್ಸಿನ ಕೊಡುಗೆಯಾಗಿ ಟಾಟಾ ಮ್ಯಾಜಿಕ್ ಮಿನಿ ವ್ಯಾನ್ ನೀಡಿರುತ್ತಾರೆ.
ಇದರ ಜೊತೆಗೆ ಕಲ್ಲಡ್ಕದ ಎಲ್ಲಾ ನಾಗರಿಕರ ತುರ್ತು ಚಿಕಿತ್ಸೆಯ ಅಗತ್ಯ ಸೇವೆಗೆ ಸದಾಸನ್ನದ್ದವಾದ ಆಂಬುಲೆನ್ಸ್ ವಾಹನವನ್ನೂ ಆಗಸ್ಟ್ 14ರ ಶುಕ್ರವಾರ ಜುಮ್ಮಾ ನಮಾಝಿನ ಬಳಿಕ ಗಣ್ಯ ಅಥಿತಿಗಳ ಉಪಸ್ಥಿತಿಯಲ್ಲಿ ಮೊಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಲೋಕಾರ್ಪಣೆಗೊಳ್ಳ ಲಿದೆ
ಈ ಕಾರ್ಯಕ್ರಮದಲ್ಲಿ ಎಲ್ಲಾ ನಾಗರಿಕ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ M.J.M ಅಲ್ ಬಿರ್ರ್ ಆಡಳಿತ ಮಂಡಳಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ




