August 13, 2026

ತೆಲಂಗಾಣದಲ್ಲಿ ನದಿಯಲ್ಲಿ ಈಜಲು ಹೋಗಿದ್ದ ಶಿಕ್ಷಕ ಸೇರಿ ಐವರು ಮಕ್ಕಳು ನೀರುಪಾಲು

0
IMG-20221106-WA0015.jpg

ತೆಲಂಗಾಣ: ನದಿಯಲ್ಲಿ ಐದು ಮಕ್ಕಳು ಸೇರಿದಂತೆ ಆರು ಜನರು ಮುಳುಗಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೇಡ್ಚಲ್-ಮಲ್ಕಾಜ್‌ಗಿರಿ ಜಿಲ್ಲೆಯ ಜವಾಹರನಗರ ಪೊಲೀಸ್ ವ್ಯಾಪ್ತಿಯ ಮಲ್ಕರಂನಲ್ಲಿ ನಡೆದಿದೆ.

ಮೃತ ಮಕ್ಕಳನ್ನು ಜಾಫರ್, ಇಸ್ಮಾಯಿಲ್, ರೆಹಾನ್, ಅಯಾನ್ ಮತ್ತು ಸೊಹೈಲ್, ಮತ್ತು ಶಿಕ್ಷಕ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ.

ಇನ್ನು ಶಿಕ್ಷಕ ಮತ್ತು ಮಕ್ಕಳೆಲ್ಲರೂ ಮಲ್ಕರಂ ಪ್ರದೇಶದಲ್ಲಿ ತಮ್ಮ ಶಿಕ್ಷಕರ ಗೃಹಪ್ರವೇಶ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದು, ಕಾರ್ಯಕ್ರಮ ಮುಗಿದ ನಂತರ ಮಕ್ಕಳು ಸಮೀಪದ ಮಲ್ಕರಂ ನದಿಗೆ ಇಳಿದಿದ್ದಾರೆ. ಈಜು ಬಾರದ ಅವರು ನೀರಿನಲ್ಲಿ ಮುಳುಗಲು ಪ್ರಾಂಭಿಸಿದರು. ಇದನ್ನು ಕಂಡ ಶಿಕ್ಷಕ ಅಬ್ದುಲ್ ರೆಹಮಾನ್ ಅವರನ್ನು ರಕ್ಷಿಸಲು ಹೋಗಿ ಅವರೂ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!