February 4, 2026

ತಾಯಿಯನ್ನು ನಿಂದಿಸಿದ್ದಕ್ಕೆ ಜೈಲಿನಿಂದ ಬಂದ ಸ್ನೇಹಿತರಿಂದ ಯುವಕನ ಕೊಲೆ – ಮೂವರ ಬಂಧನ

0
IMG-20221106-WA0016.jpg

ಬಾಗಲಕೋಟೆ: ಜಿಲ್ಲೆಯ ಇಳಕಲ್‍ನಲ್ಲಿ ಕುಡಿಯುವ ವೇಳೆ ತಾಯಿಯನ್ನು ನಿಂದಿಸಿದ್ದಕ್ಕೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಸ್ನೇಹಿತರಿಂದಲೇ ಯುವಕನ ಕೊಲೆಯಾಗಿರುವ ಘಟನೆ ವರದಿಯಾಗಿದೆ.

ವೀರೇಶ್ ಕರ್ನೂಲ್ (29) ಮೃತ ಯುವಕನಾಗಿದ್ದು, ಆರೋಪಿಗಳನ್ನು ಅವಿನಾಶ್ ಸಜ್ಜನ್, ಸಂಜು ಹುಲ್ಲೂರು ಎಂದು ಗುರುತಿಸಲಾಗಿದೆ.

ಅ. 27ರಂದು ಇಳಕಲ್ ಸಮೀಪದ ಇಂಗಳಗಿ ಗ್ರಾಮದ ಪೂಜಾರಿ ಎಂಬುವರ ಹೊಲದಲ್ಲಿ ವೀರೇಶ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಇಳಕಲ್ ಗ್ರಾಮೀಣ ಠಾಣೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಇನ್ನು ಅವಿನಾಶ್ ತಾಯಿಗೆ ವೀರೇಶ್ ನಿಂದಿಸಿದ್ದು, ಇದರಿಂದ ಕೋಪಗೊಂಡ ಅವಿನಾಶ್ ಗಲಾಟೆ ನಡೆಸಿದ್ದು, ಇದು ಅತಿರೇಕಕ್ಕೆ ಹೋಗಿ ಕುಡಿದ ಮತ್ತಲ್ಲಿ ವೀರೇಶ್‍ನನ್ನು ಅವಿನಾಶ್ ಹಾಗೂ ಸಂಜು ಸೇರಿ ಕೊಲೆ ಮಾಡಿದ್ದು, ಇದೀಗ ಮೂವರು ಮತ್ತೆ ಪೊಲೀಸರ ಅತಿಥಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!