ತನಗೆ ಕಚ್ಚಿದ ಹಾವನ್ನು ಬೆನ್ನಟ್ಟಿ ಕಚ್ಚಿ ಸಾಯಿಸಿದ ಬಾಲಕ!
ಛತ್ತೀಸ್‌ಗಢ: ಛತ್ತೀಸ್‌ಗಢದ ಜಶ್‌ಪುರ ಪ್ರದೇಶದಲ್ಲಿ ತನಗೆ ಕಚ್ಚಿದ ನಾಗರಹಾವನ್ನು ಬೆನ್ನಟ್ಟಿದ ಬಾಲಕನೋರ್ವ ಆ ಹಾವನ್ನು ಕಚ್ಚಿ ಸಾಯಿಸಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಬಾಲಕ ಬದುಕುಳಿದಿದ್ದಾನೆ.
ಜಶ್ಪುರ್ ಜಿಲ್ಲೆಯ ಪಂಡರ ಪಥ್ ಗ್ರಾಮದ ದೀಪಕ್ ರಾಮ್ ಎಂಬ ಬಾಲಕ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಪೊದೆಯೊಂದರಲ್ಲಿ ಅವಿತಿದ್ದ ನಾಗರಹಾವು ಆತನ ಕೈಗೆ ಕಚ್ಚಿದ್ದು, ಇದರಿಂದ ಕೋಪದಿಂದ ಹಾವನ್ನು ಬೆನ್ನಟ್ಟಿ ಹೋಗಿ ಹಿಡಿದಿದ್ದಾನೆ. ಬಳಿಕ ಹಾವಿನ ತಲೆಯ ಕೆಳ ಭಾಗಕ್ಕೆ ಕಚ್ಚಿದ್ದಾನೆ. ಇದರಿಂದ ಹಾವು ಸತ್ತು ಹೋಗಿದೆ.
ಇನ್ನು ದೀಪಕ್‌ಗೆ ಹಾವು ಕಚ್ಚಿರುವ ವಿಚಾರವನ್ನು ಆತನ ಸಹೋದರ ಮನೆಯವರಿಗೆ ಮುಟ್ಟಿಸಿದ್ದು, ಕೂಡಲೇ ದೀಪಕ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಬಾಲಕ ಚೇತರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.





