May 12, 2026

ಪುತ್ತೂರು: ಪಟಾಕಿ ಶೇಖರಿಸಿಟ್ಟಿದ್ದ ಗೋಡಾನ್ ನಲ್ಲಿ ಬೆಂಕಿ ಅವಘಡ: ಓರ್ವ ಗಾಯ

0
InShot_20221101_181235226.jpg

ಪುತ್ತೂರು: ಪಟಾಕಿಗಳನ್ನು ಶೇಖರಿಸಿಟ್ಟಿದ್ದ ಗೋಡಾನ್ ಗೆ ಬೆಂಕಿ ಬಿದ್ದು, ಅವಘಡ ಸಂಭವಿಸಿದ ಘಟನೆ ಪುತ್ತೂರಿನ ಬೈಪಾಸ್ ರಸ್ತೆಯ ಕಟ್ಟಡವೊಂದರಲ್ಲಿ ನಡೆದಿದೆ.

ಪಟಾಕಿಗಳನ್ನು ಶೇಖರಿಸಿಟ್ಟಿದ್ದ ಗೋಡಾನ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಿಂದಾಗಿ ಪಟಾಕಿಗಳೆಲ್ಲಾ ಸ್ಫೋಟಗೊಂಡು ಸ್ಥಳದಲ್ಲಿ ಹೊಗೆ ತುಂಬಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆಯಿಂದ ಓರ್ವ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Leave a Reply

Your email address will not be published. Required fields are marked *

error: Content is protected !!