ಬಂಟ್ಟಾಳ: ಇನ್ಫೆಂಟ್ ಜೀಸಸ್ ಕ್ರೀಡಾಂಗಣದಲ್ಲಿ ಬಂಟ್ವಾಳ ವಲಯ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟ
ಬೆಸ್ಟ್ ಆಂಗ್ಲ ಮಾದ್ಯಮ ಶಾಲೆ ಬಿ.ಸಿ ರೋಡ್ ಇದರ ಸಂಯುಕ್ತ ಆಶ್ರಯದಲ್ಲಿ ಮೊಡಂಕಾಪು ಇನ್ಫೆಂಟ್ ಜೀಸಸ್ ಕ್ರೀಡಾಂಗಣದಲ್ಲಿ ನಡೆದ ಬಂಟ್ವಾಳ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟ ಸಮಾರಂಭದ ಉದ್ಘಾಟನಾ ಕಾರ್ಯಕ್ರಮವನ್ನು ಬಂಟ್ವಾಳ ಏಜುಕೇಶನ್ ಸರ್ವಿಸ್ ಟ್ರಸ್ಟಿನ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಬಿ. ರಮಾನಾಥ ರೈ ನೆರವೇರಿಸಿದರು.
ಬಂಟ್ವಾಳ ವಲಯ ಮಟ್ಟದ ಕ್ರೀಡಾಕೂಟದ ಧ್ವಜಾರೋಹಣವನ್ನು ಬಿ.ಸಿ ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕರಾದ ಶ್ರೀಮತಿ ಧನಭಾಗ್ಯ ಆರ್ ರೈ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಇನ್ಫೆಂಟ್ ಜೀಸಸ್ ಚರ್ಚಿನ ಮುಖ್ಯ ಗುರುಗಳು ಫಾದರ್ ವೆಲೇರಿಯನ ಡಿ ಸೋಜಾ ರವರು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆ ಆಡಳಿ ಅಧಿಕಾರಿ ಶ್ರೀ ಮಹಾಬಲ ಆಳ್ವ. ಟ್ರಸ್ಟಿನ ಸದಸ್ಯರುಗಳಾದ ಶ್ರೀ ಮತಿ ರಶ್ಮಿ ಎಸ್. ಪೂಜಾ, ಸುಮ ಎಂ. ಆಳ್ವಾ,ಕಾರ್ಯಕ್ರಮದಲ್ಲಿ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀ.ಮತಿ ಸುನಿತಾ ಬಿ. ಟಿ ರವರು ಸ್ವಾಗತವನ್ನು ಕೋರಿದರು.
ಪ್ರಮುಖರಾದ ಬಂಟ್ವಾಳ ಕ್ಷೇತ್ರದ ಶಿಕ್ಷಣಾಧಿಕಾರಿ ಜ್ಞಾನೇಶ್. ಪಿ E. C. O ಶ್ರೀಮತಿ ಸುಜಾತ, Eco ಶ್ರೀಮತಿ ಸುಧಾ. Tpo ವಿಷ್ಣು ನಾರಾಯಣ ಹೆಬ್ಬಾರ್ 3 ವಲಯದ CRP ಗಳು ಶ್ರೀಮತಿ ನಂದಾ, ಶ್ರೀಮತಿ ಪ್ರೇಮಲತಾ, ಶ್ರೀ ಪ್ರದೀಪ್ ಬಂಟ್ವಾಳ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರು ಸಂಘದ ಅಧ್ಯಕ್ಷರು ಶ್ರೀ ಮತಿ ರತ್ನಾವತಿ, ಬಂಟ್ವಾಳ ವಲಯದ ನೋಡಲ್ ಅಧಿಕಾರಿ ಶಿವಪ್ರಸಾದ್ ರೈ. ಜಿಲ್ಲಾ ಉಪಾಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶ್ರೀ ನವೀನ್ನವರು, ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಇನ್ವೆಂಟ್ ಜೀಸಸ್ ಶಾಲೆ ಮುಖ್ಯ ಗುರುಗಳು, ದೀಪಿಕಾ ಪ್ರೌಢಶಾಲೆಯ ಮುಖ್ಯ ಗುರುಗಳು, ಕ್ರೀಡಾಂಗಣವನ್ನು ಕೊಟ್ಟು ಸಹಕರಿಸಿದರು ದೀಪಿಕಾ ಪ್ರೌಢಶಾಲೆ, ಮೊಡಂಕಾಪು. ಇವರುಗಳು. ಬೆಂಜನಪದವು ಶಾಲೆಯ ಮುಖ್ಯ ಗುರುಗಳು.ಎಲ್ಲಾ 3 ವಲಯಗಳ ದೈಹಿಕ ಶಿಕ್ಷಣ ಶಿಕ್ಷಕರು ವ್ಯವಸ್ಥಾಪಕರು.
ಕ್ರೀಡಾ ಜ್ಯೋತಿಯನ್ನು ರಕ್ತೇಶ್ವರಿ ದೇವಸ್ಥಾನದಿಂದ ದೀಪಿಕಾ ಪ್ರೌಢಶಾಲೆಯ ಕ್ರೀಡಾಂಗಣ ಮಾಡಂಕಾಪು ಮೆರವಣಿಗೆಯ ಮೂಲಕ ಬಂದು ಬಳಿಕ ಅದನ್ನು ಪಾರಿವಾಳಗಳನ್ನು ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಕ್ರೀಡಾ ಪ್ರತಿಜ್ಞೆ ಯನ್ನು ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹರ್ಷಿತ್ ಪ್ರತಿಜ್ಞೆ ವಿಧಿಯನ್ನು ವಾಚಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಸುವನಾರವರು ನಿರೂಪಿಸಿದರು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಸನ್ಮೆತಾ ರವರು ನೆರವೇರಿಸಿದರು.