November 26, 2026

ಆಟವಾಡುತ್ತಿದ್ದಾಗ ಕಟ್ಟಡದ 11ನೇ ಮಹಡಿಯಿಂದ ಬಿದ್ದು 6 ವರ್ಷದ ಬಾಲಕ ಸಾವು

0
image_editor_output_image-68697602-1795668284189

ಮುಂಬೈ: ಆಟವಾಡುತ್ತಿದ್ದಾಗ ಕಟ್ಟಡದ 11ನೇ ಮಹಡಿಯಿಂದ ಬಿದ್ದು 6 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ವಸೈನಲ್ಲಿ ನಡೆದಿದೆ.

ವಸೈನ ನಾಯಗಾಂವ್ ಪೂರ್ವದಲ್ಲಿರುವ ನವ್ಕಾರ್ ಟವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಮಿಲಿಟ್ (6) ಮೃತಪಟ್ಟ ಬಾಲಕ.

ಮನೆಯ ಹೊರಭಾಗದಲ್ಲಿರುವ 11ನೇ ಮಹಡಿಯ ಗ್ಯಾಲರಿಯಲ್ಲಿ ನೆರೆಮನೆಯ ಬಾಲಕಿಯೊಂದಿಗೆ ಮಿಲಿಟ್ ಆಟವಾಡುತ್ತಿದ್ದ. ಈ ವೇಳೆ ಆಟವಾಡುತ್ತಾ ಶೂ ರ‍್ಯಾಕ್ ಮೇಲೆ ಹತ್ತಿದ್ದಾನೆ. ಅಲ್ಲಿಂದ ತೆರೆದಿದ್ದ ಕಿಟಕಿಯ ಮೂಲಕ ಕೆಳಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆಯ ದೃಶ್ಯ ಕಟ್ಟಡದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕ ಕೆಳಗೆ ಬಿದ್ದ ತಕ್ಷಣ ಕುಟುಂಬಸ್ಥರು ಹಾಗೂ ಅಕ್ಕಪಕ್ಕದ ನಿವಾಸಿಗಳು ಆತಂಕದಿಂದ ಓಡಿ ಬಂದಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಕೆಳಭಾಗದಲ್ಲಿದ್ದ ಪೈಪ್ ಮೇಲೆ ಬಿದ್ದ ಪರಿಣಾಮ ಬಾಲಕನಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!