ನಂದಿನಿ ಮೊಸರಿನ ದರವನ್ನು ಲೀಟರ್‌ಗೆ 2 ರೂ.ಕಡಿತ
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಇದೇ 29ರಿಂದ ಜಾರಿಗೆ ಬರುವಂತೆ ನಂದಿನಿ ಬ್ರ್ಯಾಂಡ್ ಮೊಸರಿನ ದರವನ್ನು ಲೀಟರ್‌ಗೆ ₹2 ಕಡಿತಗೊಳಿಸಿದೆ.
ಹಾಲು ಉತ್ಪಾದಕ ರೈತರ ಮನವಿಯಂತೆ ನ.1ರಿಂದ ನಂದಿನಿ ಹಾಲು ಮತ್ತು ಮೊಸರು ದರ ಪರಿಷ್ಕರಣೆ ಮಾಡಲಾಗಿತ್ತು. ರಾಜ್ಯ ಸರ್ಕಾರವು ಮೊಸರಿನ ದರವನ್ನು ಕಡಿಮೆ ಮಾಡಲು ಸೂಚಿಸಿದ್ದು, ಅದರಂತೆ ಪ್ರತಿ ಲೀಟರ್ ಮೊಸರಿಗೆ ₹2 ಹಾಗೂ ಅರ್ಧ ಲೀಟರ್‌ಗೆ ₹1 ಕಡಿಮೆ ಮಾಡಲಾಗಿದೆ ಎಂದು ಕೆಎಂಎಫ್ ಪ್ರಕಟಣೆ ತಿಳಿಸಿದೆ.



