March 20, 2026

ವಿಟ್ಲ: ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಟ್ಯಾಲೆಂಟ್ ಎಕ್ಸಿಬಿಷನ್

0
IMG-20221101-WA0024.jpg

ವಿಟ್ಲ: ವಿಟ್ಲ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾವೇ ಆಸಕ್ತಿಯಿಂದ ತಯಾರಿಸಿದ ವಸ್ತುಗಳ ಪ್ರದರ್ಶನ ಟ್ಯಾಲೆಂಟ್ ಎಕ್ಸಿಬಿಷನ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಕನ್ನಡ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಲಾಯಿತು.
ಬಳಿಕ ನಡೆದ ಸ್ಟೂಡೆಂಟ್ ಲೆಡ್ ಕಾನ್ಫರೆನ್ಸ್ ಮತ್ತು ಟ್ಯಾಲೆಂಟ್ ಎಕ್ಸಿಬಿಷನ್ ಶಾಲಾ ಹಿರಿಯ ವಿದ್ಯಾರ್ಥಿ ಪ್ರಸ್ತುತ ಇಂಜಿನೀಯರ್ ಆಗಿರುವ ನಂದನ್ ಪಡಾರು, ಆಯುರ್ವೇದ ವೈದ್ಯ ಡಾ.ದುರ್ಗಾಪ್ರಸಾದ್ ಅವರಿಂದ ಉದ್ಘಾಟನೆಗೊಂಡಿತು.

ಲೀಡ್ ಸ್ಕೂಲ್ ಪ್ರತಿನಿಧಿ ಸ್ವಾತಿ ಶೆಟ್ಟಿ ಸೇವಾ ಭಾಗವಹಿಸಿದ್ದರು. ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಎಲ್.ಎನ್.ಕೂಡೂರು ಅಧ್ಯಕ್ಷತೆಯನ್ನು ವಹಿಸಿದ್ದರು.
ಶಾಲೆಯ 700 ವಿದ್ಯಾರ್ಥಿಗಳು ವಿಜ್ಞಾನ, ಸಮಾಜ, ಪರಿಸರ, ಚಿತ್ರಕಲೆ ಸಹಿತ ವಿವಿಧ ವಸ್ತುಗಳನ್ನು ತಯಾರಿಸಿ ವೀಕ್ಷಕರ ಮುಂದೆ ಪ್ರಸ್ತುತ ಪಡಿಸಿದರು.
ಶಾಲಾಡಳಿತ ಮಂಡಳಿ ನಿರ್ದೇಶಕ ಮೋನಪ್ಪ ಶೆಟ್ಟಿ ಉಪಸ್ಥಿತರಿದ್ದರು.

ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ್ ಡಿ.ಜಯರಾಮ ರೈ ಸ್ವಾಗತಿಸಿದರು. ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು ವಂದಿಸಿದರು. ಸಹ ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಕನ್ನಡ ನಾಡು ನುಡಿಯ ಬಗ್ಗೆ ಪ್ರಸ್ತಾವನೆ ನೀಡಿದರು. ಕವಿತಾ ಅತಿಥಿಗಳ ಪರಿಚಯ ಮಾಡಿದರು. ವೈಸ್ ಪ್ರಿನ್ಸಿಪಾಲ್ ಹೇಮ, ಜ್ಯೋತಿ ಶೆಣೈ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!