February 2, 2026

ಆಳವಾದ ಕಮರಿಗೆ ಬಿದ್ದ ಪ್ರಯಾಣಿಕರಿದ್ದ ಬಸ್: ಐವರು ಸಾವು, 25 ಜನರು ಗಾಯ

0
image_editor_output_image-1300920727-1663231741826.jpg

ರಜೌರಿ: ಜಿಲ್ಲೆಯ ಭಿಂಬರ್ ಗಲಿ ಬಳಿ ಹಲವಾರು ಪ್ರಯಾಣಿಕರಿದ್ದ ಬಸ್ ಆಳವಾದ ಕಮರಿಗೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, ಸುಮಾರು 25 ಜನರು ಗಾಯಗೊಂಡಿರುವ ಭೀಕರ ಅವಘಡ ಗುರುವಾರ ಬೆಳಗ್ಗೆ ಸಂಭವಿಸಿದೆ.

ರಾಜೌರಿಯಲ್ಲಿ ಸಂಭವಿಸಿದ ಭೀಕರ ಅಪಘಾತ ಮತ್ತು ಪ್ರಾಣಹಾನಿಯಿಂದ ತೀವ್ರ ನೊಂದಿದ್ದೇನೆ . ಈ ದುಃಖದ ಸಮಯದಲ್ಲಿ, ನನ್ನ ಭಾವನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ.

ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಜಿಲ್ಲಾಡಳಿತ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ: ಎಂದು ಜಮ್ಮು ಮತ್ತು ಕಾಶ್ಮೀರ ಎಲ್‌ಜಿ ಮನೋಜ್ ಸಿನ್ಹಾ ಹೇಳಿದ್ದಾರೆ.

ಪೂಂಚ್‌ನಿಂದ ಜಮ್ಮುವಿಗೆ ತೆರಳುತ್ತಿದ್ದಾಗ ಅವಘಡ ನಡೆದಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ 24 ಗಂಟೆಗಳಲ್ಲಿ ಸಂಭವಿಸಿದ ಎರಡನೇ ಬಸ್ ಅಪಘಾತ ಇದಾಗಿದೆ.

ಬುಧವಾರ ಮುಂಜಾನೆ, ಸಾವ್ಜಿಯಾನ್‌ನಿಂದ ಮಂಡಿಗೆ ತೆರಳುತ್ತಿದ್ದ ಮಿನಿಬಸ್ ಪೂಂಚ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ 11 ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 30 ಜನರು ಗಾಯಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!