July 6, 2026

ಪಳವಳ್ಳಿ: ವಿದ್ಯುತ್ ತಗುಲಿ ಗ್ರಾಮ ಪಂಚಾಯತ್ ನೌಕರ ಸಾವು

0
image_editor_output_image339874214-1659333242175.jpg

ಪಾವಗಡ: ತಾಲೂಕಿನ ವೀರಮ್ಮನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಗುಲಿ ಗ್ರಾಮ ಪಂಚಾಯತ್ ನೌಕರ ಸೋಮವಾರ ಮೃತಪಟ್ಟಿದ್ದಾರೆ.

ಪಳವಳ್ಳಿ ಗ್ರಾಮ ಪಂಚಾಯತ್‌ ನೌಕರ ವೀರಮ್ಮನ ಹಳ್ಳಿ ಗ್ರಾಮದ ನಿವಾಸಿ ನೀರುಗಂಟಿ ಈರಣ್ಣ(58) ಮೃತಪಟ್ಟವರು.

ಇಂದು ಬೆಳಿಗ್ಗೆ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಸಲುವಾಗಿ ಮೋಟಾರ್ ಚಾಲನೆ ಮಾಡಲು ಹೋದಾಗ ಈ ಘಟನೆ ಸಂಭವಿಸಿದ್ದು, ರಾತ್ರಿ ಸುರಿದ ಮಳೆಯಿಂದಾಗಿ ವಯರ್ ಹಾಗೂ ಇತರ ವಿದ್ಯುತ್ ಸಲಕರಣೆಗಳಿಗೆ ನೀರು ಬಿದ್ದಿರಬಹುದು ಎಂದು ಸ್ಥಳಿಯರು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!