ಕಾಮನ್‌ವೆಲ್ತ್ ಗೇಮ್ಸ್: ವೇಟ್‌ಲಿಫ್ಟಿಂಗ್ ಭಾರತಕ್ಕೆ ಮೂರನೇ ಚಿನ್ನ
ಬರ್ಮಿಂಗ್‌ಹ್ಯಾಮ್: ವೇಟ್‌ಲಿಫ್ಟರ್ ಅಚಿಂತ್ಯ ಶಿವಲಿ ಅವರು ಇಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟಿದ್ದಾರೆ.
ಭಾನುವಾರ ಇಲ್ಲಿನ ಎನ್‌ಇಸಿ ಹಾಲ್‌ನಲ್ಲಿ ನಡೆದ ಪುರುಷರ (73ಕೆ.ಜಿ) ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಶಿವಲಿ ಒಟ್ಟು 313 ಕೆಜಿ (143 ಕೆಜಿ+170 ಕೆಜಿ) ಭಾರ ಎತ್ತುವ ಮೂಲಕ ಚಿನ್ನವನ್ನು ಗೆದ್ದರು.
ಇದರೊಂದಿಗೆ ಭಾರತದ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಈವರೆಗೆ 3 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿದಂತಾಗಿದೆ.
ಶಿವಲಿ ಅವರಿಗೆ ಕಠಿಣ ಪೈಪೋಟಿ ನೀಡಿದ ಮಲೇಷ್ಯಾದ ಎರ್ರಿ ಹಿದಾಯತ್ ಮುಹಮ್ಮದ್ ಅವರು ಎರಡನೇ ಅತ್ಯುತ್ತಮ ಲಿಫ್ಟರ್ ಆಗಿ ಹೊರಹೊಮ್ಮಿದರು. ಅವರು ಒಟ್ಟು 303 ಕೆ.ಜಿ (138 ಕೆಜಿ + 165 ಕೆಜಿ) ಭಾರ ಎತ್ತಿ ಬೆಳ್ಳಿ ಪದಕ ಗೆದ್ದರು.
ಕೆನಡಾದ ಶಾದ್ ಡಾರ್ಸಿಗ್ನಿ ಒಟ್ಟು 298 ಕೆ.ಜಿ (135 ಕೆಜಿ+163 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.




