October 6, 2026

ಅಮೆರಿಕದಲ್ಲಿ ಕಾರಿಗೆ ಟ್ರಕ್ ಢಿಕ್ಕಿ: ತೆಲಂಗಾಣ ಮೂಲದ ಮಹಿಳೆ ಸಾವು

0
image_editor_output_image110142677-1791270406174

ಅಮೆರಿಕಾ: ಟ್ರಕ್ ಡಿಕ್ಕಿಯಾಗಿ ತೆಲಂಗಾಣ  ಮೂಲದ 31 ವರ್ಷದ ಭಾರತೀಯ ಮಹಿಳೆ ಮೃತಪಟ್ಟಿರುವ ಘಟನೆ ಅಮೆರಿಕದ ಮಿಸ್ಸೌರಿಯಲ್ಲಿ ನಡೆದಿದೆ.

ಮೃತರನ್ನು ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಮರಿಪೆಡಾ ಮೂಲದ ಸುಪ್ರಿಯಾ ಎಂದು ಗುರುತಿಸಲಾಗಿದೆ. ಅವರು ಮಿಸ್ಸೌರಿಯ ಸೇಂಟ್ ಲೂಯಿಸ್ ಪ್ರದೇಶದ ರೆಸ್ಟೋರೆಂಟ್‌ವೊದರಲ್ಲಿ ಕೆಲಸ ಮಾಡುತ್ತಿದ್ದರು.

ಶನಿವಾರ ರಾತ್ರಿ ರೆಸ್ಟೋರೆಂಟ್ ಕೆಲಸ ಮುಗಿಸಿಕೊಂಡು ಸ್ನೇಹಿತೆಯೊಂದಿಗೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಟ್ರಕ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸುಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ಇದ್ದ ಮತ್ತೊಬ್ಬ ಭಾರತೀಯ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Leave a Reply

Your email address will not be published. Required fields are marked *

error: Content is protected !!