ಉದ್ಯಮಿಯ ಪುತ್ರನ ಅಪಹರಣ: 3 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು
ಬೆಂಗಳೂರು: ಉದ್ಯಮಿಯ ಮಗನನ್ನು ಅಪಹರಿಸಿದ್ದ ನಾಲ್ವರು ಆರೋಪಿಗಳನ್ನು ಘಟನೆ ನಡೆದ 3 ಗಂಟೆಯೊಳಗೆ ಯಲಹಂಕಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಕಲಬುರಗಿ ಟೌನ್‌ನ ನಿವಾಸಿ ರಮೇಶ್‌ರಾಥೋಡ್ (43),ರಿಜ್ವಾನ್ ಪಟೇಲ್ (23), ಇಂದ್ರಜಿತ್ ಪವಾರ್(23), ಹರೀಶ್ ಕುಮಾರ್ (24) ಬಂಧಿತರು.ಯಲಹಂಕ ಕಟ್ಟಿಗೇನಹಳ್ಳಿಯ ನಿವಾ ಸಿಜಗದೀಶ್ (19) ಅಪಹರಣಕ್ಕೊಳಗಾದ ಉದ್ಯಮಿಯ ಪುತ್ರ. ಆರೋಪಿಗಳಿಂದ 1ಇನ್ನೋವಾ, 1 ಫಾರ್ಚುನರ್ ಕಾರನ್ನು ಜಪ್ತಿ ಮಾಡಲಾಗಿದೆ.
ಜಗದೀಶ್ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದು, ಜು.18ರಂದುಕಾಲೇಜಿನಿಂದ ಬೈಕ್‌ನಲ್ಲಿ ಬರುತ್ತಿದ್ದಾಗಮಾರ್ಗಮಧ್ಯೆ ಕಟ್ಟಿಗೇನಹಳ್ಳಿಯ ಮುನೇಶ್ವರರಸ್ತೆ ಬಳಿ ಆರೋಪಿಗಳು ಆತನ ಬೈಕ್ ಅನ್ನುಅಡ್ಡಗಟ್ಟಿದ್ದರು.
ನಂತರ ಬಲವಂತವಾಗಿ ತಮ್ಮಇನ್ನೋವಾ ಕಾರಿನೊಳಗೆ ಕೂರಿಸಿಕೊಂಡು ಬೆಂಗಳೂರಿನಿಂದ ಚಿತ್ರದುರ್ಗದ ಕಡೆ ತೆರಳಿದ್ದರು.




