ಸುಳ್ಯ ಮುಸ್ಲಿಂ ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ಪ್ರಕರಣ: ಐವರು ಆರೋಪಿಗಳ ಬಂಧನ
ಸುಳ್ಯ: ಸುಳ್ಯ ತಾಲೂಕಿನ ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಗಾಯಾಳು ಮಸೂದ್(19) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಆರೋಪಿಗಳಾದ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸಾರಾಂಶ:
ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ವಾಸಿ ಮಸೂದ್ ಎಂಬಾತನು ಸುಮಾರು 1 ತಿಂಗಳ ಹಿಂದೆ ಸುಳ್ಯ ತಾಲೂಕು ಕಳಂಜ ಗ್ರಾಮದ ಕಳಂಜದಲ್ಲಿರುವ ಅಜ್ಞ ಅಬ್ಬು ಮುಕ್ರಿ ಎಂಬವರ ಮನೆಗೆ ಬಂದವನು ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಫಿರ್ಯಾದಿದಾರರು ತನ್ನ ಅಜ್ಜಿ ಮನೆಯಾದ ಕಳಂಜದಲ್ಲಿರುವ ಸಮಯ, ನಗರ ಬಸ್ಸು ನಿಲ್ದಾಣದ ಬಳಿ ಜನ ಗುಂಪು ಸೇರಿರುವುದನ್ನು ಕಂಡು ರಸ್ತೆಗೆ ಬಂದಾಗ ಅಲ್ಲಿ ಪರಿಚಯದ ಅಭಿಲಾಶ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್ ಮತ್ತು ಭಾಸ್ಕರ ರವರು ಇದ್ದು, ಅವರು ಫಿರ್ಯಾದಿದಾರರನ್ನು ಕರೆದು ಸಂಜೆಯ ವೇಳೆ ಸುಧೀರನಿಗೆ ಮಸೂದನು ಅಂಗಡಿಯ ಬಳಿ ತಾಗಿದ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಂಡು ಬಳಿಕ ಮಸೂದನು ಸುಧೀರನಿಗೆ ಬಾಟಲ್ ತೋರಿಸಿ ಬೆದರಿಕೆ ಹಾಕಿರುವುದಾಗಿ ಹೇಳಿ ನೀನು ಮಸೂದನನ್ನು ಕರೆದುಕೊಂಡು ಬಾ. ನಾವು ಮಾತನಾಡಿ ಮುಗಿಸುವ ಎಂದು ಹೇಳಿದ್ದರು.
ಅದರಂತೆ ಫಿರ್ಯಾದಿದಾರರು ಮಸೂದ್ ನ ಅಜ್ಜಿ ಮನೆಗೆ ಹೋಗಿ ಆತನನ್ನು ನಿಮ್ಮ ನಗರಕ್ಕೆ ಕರೆದುಕೊಂಡು ಬಂದಾಗ ಸಮಯ ಸುಮಾರು ರಾತ್ರಿ 11-00 ಗಂಟೆಗೆ ಆರೋಪಿತರು ಒಟ್ಟು ಸೇರಿ ಏಕಾ ಏಕಿ ಮಸೂದನಿಗೆ ಕೈಯಿಂದ ಹಲ್ಲೆ ಮಾಡಲು ಪ್ರಾರಂಭಿಸಿದ್ದು, ಆಗ ಫಿರ್ಯಾದಿದಾರರು ಹೊಡೆಯಬೇಡಿ ಎಂದು ಹೇಳಿ ಮಸೂದನನ್ನು ಗಟ್ಟಿಯಾಗಿ ತಬ್ಬಿಕೊಂಡಾಗ ದೊಡ್ಡಾಟವಾಗಿ ಫಿರ್ಯಾದಿದಾರರು ಮತ್ತು ಮಸೂದನು ನೆಲಕ್ಕೆ ಬಿದ್ದಿದ್ದು, ಬಿದ್ದಲ್ಲಿಗೆ ಅವರೆಲ್ಲರೂ ಕಾಲಿನಿಂದ ತುಳಿದು ಅವರ ಪೈಕಿ ಅಭಿಲಾಶನು ಅಲ್ಲಿ ಬಿದ್ದುಕೊಂಡಿದ್ದ.
ಖಾಲಿ ಜೂಸ್ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದನು. ಆಗ ಫಿರ್ಯಾದಿದಾರರು ಮಸೂದನಲ್ಲಿ ಓಡಿ ತಪ್ಪಿಸಿಕೊಳ್ಳಲು ಹೇಳಿದಂತೆ ಮಸೂದನು ಅಲ್ಲಿಂದ ಓಡಿ ಹೋಗಿದ್ದು, ಬಳಿಕ ಪಿರ್ಯಾದಿದಾರರು ಮತ್ತು ಅವರ ಕಡೆಯವರು ಮಸೂದನನ್ನು ಹುಡುಕುತ್ತಿರುವ ಸಮಯ ದಿನಾಂಕ 20.07 2022 ರಂದು ರಾತ್ರಿ 1-30 ಗಂಟೆಗೆ ಅಲ್ಲಿಯೇ ಅಬೂಬಕ್ಕರ್ ಎಂಬವರ ಬಾವಿಯ ಬಳಿ ಮಸೂದನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದಾನೆ.
ಅವನನ್ನು ಉಪಚರಿಸಿ ಕಾರಿನಲ್ಲಿ ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ, ಮಂಗಳೂರಿಗೆ ಹೋಗುವಂತೆ ಸೂಚಿಸಿದಂತೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಮಸೂದನಿಗೆ ತೀವು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿರುವುದಾಗಿದೆ.
ಈ ಘಟನಗೆ ಕಾರಣವೆನೆಂದರೆ ನಿನ್ನೆ ದಿನ ಸಂಜೆ ಮಸೂದನು ಅಂಗಡಿ ಬಳಿ ಸುಧೀರನಿಗೆ ತಾಗಿ ಹಲ್ಲೆ ಮಾಡಿ ಬೆದರಿಕೆ ಒಡ್ಡಿದ ದ್ವೇಷದಿಂದ ಸುಧೀರನು ಆತನ ಸ್ನೇಹಿತರನ್ನು ಒಟ್ಟುಗೂಡಿಸಿ ಅವರಲ್ಲ ಮಸೂದನನ್ನು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿದಾರರಲ್ಲಿ ಮಸೂದನನ್ನು ಮನೆಯಿಂದ ಕರೆಸಿ ಆತನಿಗೆ ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ನಡೆಸಿ ಖಾಲಿ ಜೂಸ್ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದಿರುವುದಾಗಿದೆ ಎಂಬಿತ್ಯಾದಿ.




