July 7, 2026

ಪುತ್ತೂರು: ನೇಣು ಬಿಗಿದು ಯುವಕ ಆತ್ಮಹತ್ಯೆ

0
image_editor_output_image-2090898108-1783396491396

ಪುತ್ತೂರು: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.6ರಂದು ಇರ್ದೆಯಲ್ಲಿ ನಡೆದಿದೆ.

ಇರ್ದೆ ಗ್ರಾಮದ ಮಣ್ಣಾಪು ನಿವಾಸಿ ಗಂಗಾಧರ ಮಡಿವಾಳರವರ ಪುತ್ರ ತಿಲಕ್ (18ವ.)ರವರು ಆತ್ಮಹತ್ಯೆ ಮಾಡಿಕೊಂಡವರು. ಅವರು ತನ್ನ ಮನೆಯ ಕೋಣೆಯಲ್ಲಿ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತರು ತಂದೆ ಗಂಗಾಧರ ಮಡಿವಾಳ, ತಾಯಿ ಮಮತಾ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!