March 26, 2026

ಕಳಂಜದಲ್ಲಿ ಸಂಘಪರಿವಾರದಿಂದ ಅಮಾಯಕ ಮುಸ್ಲಿಂ ಯುವಕನ ಕೊಲೆಯತ್ನ: ಆರೋಪಿಗಳನ್ನು ಕೂಡಲೇ ಬಂಧಿಸಲು ಎಸ್‌ಡಿಪಿಐ ಆಗ್ರಹ

0
IMG-20220720-WA0001.jpg

ಬೆಳ್ಳಾರೆ: ಸುಳ್ಯ ತಾಲೂಕಿನ ಕಳಂಜದಲ್ಲಿ ಅಮಾಯಕ ಮುಸ್ಲಿಂ ಯುವಕನನ್ನು 10ರಷ್ಟು ಮಂದಿ ಸಂಘಪರಿವಾರದ ದುಷ್ಕರ್ಮಿಗಳು ಕ್ಷುಲ್ಲಕ ವಿಚಾರವನ್ನು ಮುಂದಿಟ್ಟು ಮಾರಣಾಂತಿಕವಾಗಿ ಗುಂಪು ಹಲ್ಲೆ ಮಾಡಿ ಕೊಲೆಯತ್ನ ನಡೆಸಿದ ಘಟನೆಯನ್ನು ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸುತ್ತದೆ.

ನಿನ್ನೆ ತಡ ರಾತ್ರಿ ಸಂಘಪರಿವಾರದ ದುಷ್ಕರ್ಮಿಗಳ ಗೂಂಪೊಂದು ಕ್ಷುಲ್ಲಕ ವಿಚಾರಕ್ಕೆ ಸಂಬಂಧಪಟ್ಟು ಮುಸ್ಲಿಮ್ ಯುವಕನ ಮೇಲೆ ಮಾರಣಾಂತಿಕ ದಾಳಿ ನಡೆಸಿ ಕೊಲೆಗೈಯಲು ಯತ್ನಿಸಿದ್ದು, ದಾಳಿಗೊಳಗಾದ ಮುಸ್ಲಿಂ ಯುವಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಶಾಂತವಾಗಿರುವ ಸುಳ್ಯ ತಾಲೂಕಿನಲ್ಲಿ ಈ ರೀತಿಯ ಗುಂಪು ಹಲ್ಲೆ ನಡೆಸಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಸಂಘಪರಿವಾರದ ದುಷ್ಕರ್ಮಿಗಳನ್ನು ಪೊಲೀಸ್ ಇಲಾಖೆ ಕೂಡಲೇ ಕೊಲೆಯತ್ನ ಪ್ರಕರಣ ದಾಖಲಿಸಿ ಬಂಧಿಸಬೇಕು ಇಲ್ಲದಿದ್ದಲ್ಲಿ ಪಕ್ಷ ಇದರ ವಿರುದ್ಧವಾಗಿ ಹೋರಾಟ ನಡೆಸಲಿದೆ ಎಂದು ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!