ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ರಂಝಾನ್‌ನ ಕೊನೆಯ ಶುಕ್ರವಾರದ ಪ್ರಾರ್ಥನೆಗೆ ನಿರ್ಬಂಧ
ಶ್ರೀನಗರ: ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ರಂಜಾನ್‌ನ ಕೊನೆಯ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ನೀಡದಿರಲು ಜಮ್ಮು ಮತ್ತು ಕಾಶ್ಮೀರ ಆಡಳಿತ ನಿರ್ಧರಿಸಿದೆ.
ಶಬ್-ಎ-ಕದ್ರ್ ರಂಜಾನ್‌ನ 27 ನೇ ರಾತ್ರಿಯ ಪ್ರಾರ್ಥನೆ ಜಾಮಿಯಾ ಮಸೀದಿ ಗ್ರ್ಯಾಂಡ್ ಮಸೀದಿಯಲ್ಲಿ ಅನುಮತಿಸಲಾಗುವುದಿಲ್ಲ. ಬುಧವಾರ ಸಂಜೆ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಈ ನಿರ್ಬಂಧ ವಿಧಿಸಿದೆ.
ಶಾಬ್-ಎ-ಕದ್ರ್ – ಮುಸ್ಲಿಮರು ಸುದೀರ್ಘ ಸಮಯ ಪ್ರಾರ್ಥನೆ ಮಾಡುವ ರಾತ್ರಿ ಮತ್ತು ರಂಝಾನ್ ನ ಕೊನೆಯ ಶುಕ್ರವಾರ ದಿನದ ಪ್ರಾರ್ಥನೆ ನಾಳೆ ನಡೆಯಲಿದೆ. ಪ್ರಾರ್ಥನೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ ಆದ್ದರಿಂದ ಅವಕಾಶ ನಿರಾಕರಿಸಲಾಗಿದೆ.





