ಕಿರುಕುಳ ಪ್ರಕರಣ: ನಟ ನವಾಜುದ್ದೀನ್ ಸಿದ್ದಿಕಿಗೆ ಕ್ಲೀನ್ ಚಿಟ್
ಮುಜಾಫರ್‌ನಗರ: ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬದ ನಾಲ್ವರಿಗೆ ಉತ್ತರಪ್ರದೇಶದ ಮುಜಾಫರ್‌ನಗರದ ನ್ಯಾಯಾಲಯವು ಕಿರುಕುಳ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ.
ವಿಶೇಷ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯದ ನ್ಯಾಯಾಧೀಶರಾದ ಸಂಜೀವ್ ಕುಮಾರ್ ತಿವಾರಿ ಪ್ರಕರಣದ ಅವರು ಮುಕ್ತಾಯದ ವರದಿಯನ್ನು ಪ್ರಸ್ತುತಪಡಿಸಲು ಮತ್ತು ದೂರುದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ನವಾಜುದ್ದೀನ್ ಸಿದ್ದಿಕಿ, ಅವರ ಸಹೋದರರಾದ ಮಿನಾಜುದ್ದೀನ್, ಫಯಾಜುದ್ದೀನ್, ಅಯಾಜುದ್ದೀನ್ ಮತ್ತು ಅವರ ತಾಯಿ ಮೆಹರುನಿಸ್ಸಾ ಅವರಿಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ.





