ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅಮೆರಿಕದ ಸೂಪರ್ ಮಾಡೆಲ್
ಮುಂಬೈ: ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರ ನೋಡಿ ಬೇಸರವಾಯಿತು ಎಂದು ಭಾರತ ಮೂಲದ ಅಮೆರಿಕ ಸೂಪರ್ ಮಾಡೆಲ್ ಹಾಗೂ ಲೇಖಕಿ ಪದ್ಮಾ ಲಕ್ಷ್ಮೀ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತದಲ್ಲಿ ಅಥವಾ ಬೇರೆಲ್ಲಿಯೂ ಹಿಂದೂ ಧರ್ಮಕ್ಕೆ ಯಾವುದೇ ಬೆದರಿಕೆ ಇಲ್ಲ. ಈ ಪ್ರಾಚೀನ ಮತ್ತು ವಿಶಾಲವಾದ ಭೂಮಿಯಲ್ಲಿ ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಬದುಕಲು ಸಾಧ್ಯವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ
ದೇಶದಲ್ಲಿ ವ್ಯಾಪಕ ಮುಸ್ಲಿಂ ವಿರೋಧಿ ವಾಕ್ಚಾತುರ್ಯವಿದೆ. ಹಿಂದೂಗಳು ಈ ಭಯ ಉತ್ತೇಜಕ ಮತ್ತು ಪ್ರಚಾರಕ್ಕೆ ಬಲಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ವ್ಯಾಪಕವಾದ ಮುಸ್ಲಿಂ ವಿರೋಧಿ ವಾಕ್ಚಾತುರ್ಯವು ಜನರನ್ನು ವಿಷಪೂರಿತಗೊಳಿಸುತ್ತದೆ. ಈ ಪ್ರಚಾರವು ಅಪಾಯಕಾರಿ ಮತ್ತು ಹಾನಿಕಾರಕ. ನೀವು ಯಾರನ್ನಾದರೂ ತುಚ್ಛವಾಗಿ ಕಂಡರೆ ದಬ್ಬಾಳಿಕೆಗೆ ದಾರಿ ಮಾಡಿಕೊಟ್ಟಂತೆ ಎಂದು ತಿಳಿಸಿದ್ದಾರೆ
ಹಿಂದೂಗಳೇ, ಈ ಭಯ ಹುಟ್ಟಿಸುವವರಿಗೆ ಮಣಿಯಬೇಡಿ. ಭಾರತದಲ್ಲಿ ಅಥವಾ ಬೇರೆಲ್ಲಿಯೂ ಹಿಂದೂ ಧರ್ಮಕ್ಕೆ ಯಾವುದೇ ಅಪಾಯವಿಲ್ಲ. ನಿಜವಾದ ಆಧ್ಯಾತ್ಮಿಕತೆಯು ಯಾವುದೇ ರೀತಿಯ ದ್ವೇಷವನ್ನು ಬಿತ್ತುವುದಿಲ್ಲ ಎಂದಿದ್ದಾರೆ.





