ನರಹಂತಕ ಇಸ್ರೇಲ್ ಕದನ ವಿರಾಮ ಉಲ್ಲಂಘನೆ: ಗಾಝಾ ಮೇಲೆ ಮತ್ತೆ ವೈಮಾನಿಕ ದಾಳಿ: ಮಕ್ಕಳು ಸೇರಿ 32 ಪ್ಯಾಲೆಸ್ಟೀನಿಯನರು ಮೃತ್ಯು
ಗಾಝಾ: ಕದನ ವಿರಾಮ ಉಲ್ಲಂಘಿಸಿ ನರಹಂತಕ ಇಸ್ರೇಲ್ ಶನಿವಾರ ಗಾಝಾ ಮೇಲೆ ಮತ್ತೆ ವೈಮಾನಿಕ ದಾಳಿ ನಡೆಸಿದ್ದು, ದಾಳಿಯಲ್ಲಿ ಮಕ್ಕಳು ಸೇರಿದಂತೆ 32 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ಟೀನಿಯನ್ ಪ್ರದೇಶದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.
ಜನರ ಸೀಮಿತ ಸಂಚಾರಕ್ಕಾಗಿ” ಗಾಝಾ ಮತ್ತು ಈಜಿಪ್ಟ್ ನಡುವಿನ ನಿರ್ಣಾಯಕ ರಫಾ ಕ್ರಾಸಿಂಗ್ ಅನ್ನು ಭಾನುವಾರ ಮತ್ತೆ ಓಪನ್ ಮಾಡುವುದಾಗಿ ಇಸ್ರೇಲ್ ಘೋಷಿಸಿದ ನಂತರ ಮತ್ತೆ ರಕ್ತಪಾತ ನಡೆದಿದೆ.
ಇಂದು ಬೆಳಗಿನ ಜಾವ ಸಾವಿನ ಸಂಖ್ಯೆ 32 ಕ್ಕೆ ಏರಿದೆ, ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ” ಎಂದು ಹಮಾಸ್ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಕ್ಷಣಾ ಪಡೆಯಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.




