ಆಂಬ್ಯುಲೆನ್ಸ್ ನಿರ್ವಾಹಕರಿಂದ ದುಪ್ಪಟ್ಟು ಹಣದ ಬೇಡಿಕೆ: ಮಗನ ಮೃತದೇಹವನ್ನು ಬೈಕ್ ನಲ್ಲಿ ಕೊಂಡೊಯ್ದ ತಂದೆ
ತಿರುಪತಿ: ಆಂಬ್ಯುಲೆನ್ಸ್ ನಿರ್ವಾಹಕರು ಮೃತದೇಹವನ್ನು ಕೊಂಡೊಯ್ಯಲು ಭಾರಿ ಮೊತ್ತ ಕೇಳಿದ್ದು ಮೊದಲೇ ಮಗನ ಸಾವಿನಿಂದ ನೊಂದಿದ್ದ ತಂದೆ ಮಗನ ಶವವನ್ನು ತಿರುಪತಿಯಿಂದ 90 ಕಿ.ಮೀ ದೂರದಲ್ಲಿರುವ ತನ್ನ ಗ್ರಾಮಕ್ಕೆ ಬೈಕ್ ನಲ್ಲಿ ಕೊಂಡೊಯ್ದ ದಾರುಣ ಘಟನೆ ನಡೆದಿದೆ.
ತಿರುಪತಿಯ ಎಸ್‌ವಿಆರ್ ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಯ ಖಾಸಗಿ ಆಂಬ್ಯುಲೆನ್ಸ್ ನಿರ್ವಾಹಕರು ಇಂದು ಮುಂಜಾನೆ ಆಂಬ್ಯುಲೆನ್ಸ್ ಬಾಡಿಗೆಗೆ ಬೆಲೆಯನ್ನು ಕಡಿಮೆ ಮಾಡಲು ನಿರಾಕರಿಸಿದರು. ಇದರಿಂದ ದಿಕ್ಕು ತೋಚದ ತಂದೆ ಬೇರೆ ದಾರಿಯಿಲ್ಲದೆ ತನ್ನ ಮಗನನ್ನು ಮೋಟಾರ್‌ಸೈಕಲ್‌ನಲ್ಲಿ ಕೈಯಲ್ಲಿ ಹಿಡಿದುಕೊಂಡು ಹೋಗಿದ್ದಾರೆ.
ಈ ಘಟನೆಯು ಆಕ್ರೋಶಕ್ಕೆ ಕಾರಣವಾಗಿದ್ದು ಜಿಲ್ಲಾ ಅಧಿಕಾರಿಗಳು ತನಿಖೆಗೆ ಸೂಚಿಸಿದ್ದಾರೆ. ಘಟನೆಗೆ ಕಾರಣರಾದ ಆರು ಖಾಸಗಿ ಆಂಬ್ಯುಲೆನ್ಸ್ ನಿರ್ವಾಹಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.





