ಮದುವೆಯಾಗಲು ಹೆಣ್ಣು ಸಿಗದ ಬೇಸರ: ನೇಣುಬಿಗಿದು ಯುವಕ ಆತ್ಮಹತ್ಯೆ
ಹುನಗುಂದ : ಪಟ್ಟಣದ ಅಮರಾವತಿ ರಸ್ತೆಯಲ್ಲಿರುವ ಇಂಡಿಯನ್ ಗ್ಯಾಸ್ ಗೋಡಾನ್ ಕಪೌಂಡ್ ನ ಒಳಗಡೆಯಲ್ಲಿರುವ ಮರಕ್ಕೆ ಯುವಕನೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ
ಬಸವರಾಜ ಸಿದ್ರಾಮಪ್ಪ ಕೊಡಗಲಿ (27) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ.
ಅಮರಾವತಿ ಗ್ರಾಮದ ಯುವಕ ಬಸವರಾಜ ಸಿದ್ರಾಮಪ್ಪ ಕೊಡಗಲಿ ಕೆಲವು ತಿಂಗಳಿಂದ ಬಿಳಿ ಕಾಮಲೆ ರೋಗದಿಂದ ಬಳಲುತ್ತಿದ್ದರು.
ಚಿಕಿತ್ಸೆ ಪಡೆದರೂ ಗುಣಮುಖವಾಗದೇ ಇರೋದು ಮತ್ತು ಕಳೆದ ಎರಡು ವರ್ಷದಿಂದ ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದರು ಹೆಣ್ಣು ಸಿಗದೇ ಇರೋದರಿಂದ ಮನ ನೊಂದು ಸೋಮವಾರ ರಾತ್ರಿ ಇಂಡಿಯನ್ ಗ್ಯಾಸ್ ಗೋಡಾನ್ ಕಪೌಂಡನಲ್ಲಿರುವ ತೆಂಗಿನಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.





